Connect with us

LATEST NEWS

ಖಾಸಗಿ ಬಸ್ ಡ್ರೈವರ್ ಫುಲ್ ಟೈಟ್….!!

ಉಡುಪಿ, ಸೆಪ್ಟೆಂಬರ್ 14: ಖಾಸಗಿ ಬಸ್ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಬಸ್ ನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ರಸ್ತಯಲ್ಲಿ ತೂರಾಡಿದ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಉಡುಪಿ ಮೂಲದ ಬಸ್ ಚಾಲಕ ಮೊದಲೇ ಕುಡಿದುಕೊಂಡು ಬಸ್ ಚಾಲನೆಗೆ ಬಂದಿದ್ದು, ಬಳಿಕ ಬಸ್ಸನ್ನು ಮಧ್ಯರಾತ್ರಿ ರಸ್ತೆ ಮಧ್ಯೆ ವಿರಾಮಕ್ಕೆಂದು ನಿಲ್ಲಿಸಿದ್ದಾನೆ. ಈ ಸಂದರ್ಭ ಮತ್ತೆ ಕುಡಿದಿದ್ದು ದೇಹದ ನಿಯಂತ್ರಣ ಕಳೆದುಕೊಂಡಿದ್ದಾನೆ. ಅಲ್ಲದೇ ಓಲಾಡುತ್ತಾ ಮತ್ತೆ ಬಸ್ ಬಳಿ ಬಂದು ಚಾಲನೆಗಾಗಿ ಪ್ರಯತ್ನಿಸಿದ್ದಾನೆ.

ಈ ವೇಳೆ ಸ್ಥಳೀಯರು ಚಾಲಕನ ಅವಸ್ಥೆ ನೋಡಿ ಥಳಿಸಿದ್ದಾರೆ. ಮೊದಲೇ ದೇಹದ ನಿಯಂತ್ರಣ ಕಳೆದುಕೊಂಡಿದ್ದ ಚಾಲಕ ಹೆದ್ದಾರಿ ನಡುವೆಯೇ ಬಿದ್ದಿದ್ದಾನೆ. ಈ ಘಟನೆಯನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ವೈರಲ್ ಆಗುತ್ತಿದೆ. ಆದರೆ ಚಾಲಕನ ಹೆಸರು ಹಾಗೂ ಇತರ ಮಾಹಿತಿ ಲಭ್ಯವಾಗಿಲ್ಲ.

Advertisement
Click to comment

You must be logged in to post a comment Login

Leave a Reply