LATEST NEWS
VIDEO – ಪುಲ್ ಟೈಟ್ ಆಗಿ ರಸ್ತೆ ಬಿಟ್ಟು ರೈಲ್ವೆ ಟ್ರ್ಯಾಕ್ ಮೇಲೆ ಕಾರು ಚಲಾಯಿಸಿದ ವ್ಯಕ್ತಿ…
ಕೇರಳ ಜುಲೈ 21: ವ್ಯಕ್ತಿಯೊಬ್ಬ ಪುಲ್ ಟೈಟ್ ಆಗಿ ರಸ್ತೆ ಬಿಟ್ಟು ರೈಲ್ವೆ ಟ್ರ್ಯಾಕ್ ಮೇಲೆ ಕಾರು ಚಲಾಯಿಸಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲ್ವೆ ಟ್ರ್ಯಾಕ್ ಮೇಲೆ ಕಾರನ್ನು ಚಲಾಯಿಸಿದ ವ್ಯಕ್ತಿಯನ್ನು ಕಣ್ಣೂರಿನ ಜಯಪ್ರಕಾಶ್ ಎಂದು ಗುರುತಿಸಲಾಗಿದೆ.
ಈತ ಕಣ್ಣೂರು ಬಳಿಯ ತಾಜಿ ರೈಲ್ವೆ ಕ್ರಾಸಿಂಗ್ನಲ್ಲಿ ಟ್ರ್ಯಾಕ್ ಮೇಲೆ ಸುಮಾರು 15 ಮೀಟರ್ ಕಾರು ಚಲಾಯಿಸಿಕೊಂಡು ಹೋಗಿದ್ದ ಬಳಿಕ ಮುಂದಕ್ಕೆ ಹೋಗಲಾಗದೇ ಅಲ್ಲಿಯೇ ಕೆಲಹೊತ್ತು ಕಾರಿನಲ್ಲಿ ಕೂತಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಓಡಿ ಬಂದು ಆತನನ್ನು ಹೊರಗೆಳೆದು ಬಳಿಕ ಕಾರನ್ನು ಟ್ರ್ಯಾಕ್ನಿಂದ ನೂಕಿದ್ದಾರೆ.
ಸುದ್ದಿ ತಿಳಿದು ಜಯಪ್ರಕಾಶ್ ವಿರುದ್ಧ ಕಣ್ಣೂರು ನಗರ ಠಾಣೆ ಪೊಲೀಸರು ಮೋಟಾರು ವಾಹನ ಕಾಯ್ದೆ ಹಾಗೂ ರೈಲ್ವೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
You must be logged in to post a comment Login