Connect with us

    LATEST NEWS

    ಡ್ರಗ್ಸ್ ಪ್ರಕರಣ- ಮಣಿಪಾಲದಲ್ಲಿ ವಿದ್ಯಾರ್ಥಿ ಸಹಿತ 3 ಅರೆಸ್ಟ್..!

    ಉಡುಪಿ, ಜೂನ್ 15: ಉಡುಪಿಯಲ್ಲಿ ಡ್ರಗ್ಸ್ ವಿರುದ್ಧ ಪೊಲೀಸ್ ಸಮರ ಮುಂದುವರಿದಿದ್ದು. ನಗರದ ಮಣಿಪಾಲ ಠಾಣಾಧಿಕಾರಿ ಮತ್ತು ತಂಡ ಹೆರ್ಗಾ ಗ್ರಾಮದ ಹೈ ಪಾಯಿಂಟ್ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿ ಮಾದಕ ಪದಾರ್ಥಗಳನ್ನು ವಶಕ್ಕೆ ಪಡೆದಿದೆ.

    ಹೆರ್ಗಾ ಗ್ರಾಮದ ಹೈ-ಪಾಯಿಂಟ್‌ ಹೈಟ್ಸ್ ಅಪಾರ್ಟ್ಮೆಂಟ್‌ ಮೇಲೆ ದಾಳಿ ಮಾಡಿ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ ಮಣಿಪಾಲದ ಎಂ.ಐ.ಟಿ ವಿದ್ಯಾರ್ಥಿ ಶಶಾಂಕ (25) ಹಾಗೂ ಆತನ ಜೊತೆಯಿದ್ದ ಕಾರ್ಕಳದ ಫೆಡ್ಲರ್‌ ಆದ ಆದಿಲ್‌ (36) ಇವರನ್ನು ವಶಕ್ಕೆ ಪಡೆದು ಸುಮಾರು 300 ಗ್ರಾಂ ಗಾಂಜಾ ವಶಕ್ಕೆಪಡೆಯಲಾಗಿದೆ. ನಂತರ ಆದಿಲ್‌ ನೀಡಿದ ಮಾಹಿತಿಯ ಆಧಾರದ ಮೇಲೆ ಹಿರಿಯಡ್ಕ–ಕಾರ್ಕಳ ರಸ್ತೆಯಲ್ಲಿ ನೌಶದ್‌(27) ಎಂಬಾತನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 1 ಕೆಜಿ 100 ಗ್ರಾಂ ಗಾಂಜಾವನ್ನು ಉಡುಪಿ ಜಿಲ್ಲಾ ಪೋಲಿಸರು ವಶ ಪಡಿಸಿದ್ದಾರೆ.

    ವಿಚಾರಣೆಯಿಂದ ಆದಿಲ್‌ ಮತ್ತು ನೌಶದ್‌ ಎಂಬ ಗಾಂಜಾ ಪೆಡ್ಲರ್‌ಗಳು ಆತನ ಸ್ನೇಹಿತ ಇಮ್ರಾನ್‌ ಖಾನ್‌ ಯಾನೆ ಶಕೀಲ್‌ ಎಂಬುವವನು ಮೂಲತ: ಕಾರ್ಕಳ ನಿವಾಸಿಯಾಗಿದ್ದು, ಪ್ರಸ್ತುತ ಓಮನ್‌ ದೇಶದ ಮಸ್ಕತ್‌ನಲ್ಲಿ ವಾಸವಿದ್ದು ಅಲ್ಲಿಂದ ನೌಶದ್‌ ಮತ್ತು ಆದಿಲ್‌ನನ್ನು ಸಂಪರ್ಕಿಸಿ ಕಾಸರಗೋಡಿನ ಉಪ್ಪಳದಿಂದ ಗಾಂಜಾ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಕಂಡು ಬಂದಿದೆ.

    ಪ್ರಕರಣದ ಮುಖ್ಯ ಆರೋಪಿ ಇಮ್ರಾನ್‌ ಖಾನ್‌ ನ ಪತ್ತಗೆ ಉಡುಪಿ ಎಸ್ ಪಿ ಮತ್ತು ಮಣಿಪಾಲ ಪೊಲೀಸ್‌ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ಆತನ ವಿರುದ್ಧ ಲುಕ್‌ ಔಟ್‌ ನೋಟೀಸ್‌ (ಎಲ್‌ಓಸಿ) ಹೊರಡಿಸಲು ಸೂಚಿಸಿರುತ್ತಾರೆ. ಈ ಪ್ರಕರಣದಲ್ಲಿ ವೇಳೆ ಓರ್ವ ವಿದ್ಯಾರ್ಥಿ ಪೆಡ್ಲರ್‌ ಸೇರಿದಂತೆ ಮೂರು ಜನರನ್ನು ದಸ್ತಗಿರಿ ಮಾಡಿ ಸುಮಾರು 75 ಸಾವಿರ ಮೌಲ್ಯದ 1.5 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಮಾದಕ ವಸ್ತುಗಳ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply