LATEST NEWS
ಡ್ರಗ್ಸ್ ಮಾರಾಟಕ್ಕೆ ಯತ್ನ ಇಬ್ಬರು ಅರೆಸ್ಟ್

ಮಂಗಳೂರು ಜೂನ್ 12: ಅಕ್ರಮವಾಗಿ ಮಾದಕವಸ್ತುವನ್ನು ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೆ.ಸಿ ರೋಡ್ ತಲಪಾಡಿ ನಿವಾಸಿಯಾಗಿರುವ ಅಬ್ಬುಲ್ ರಶೀದ್ ಮೊಯದ್ದೀನ್ (41), ದೇರಳಕಟ್ಟೆಯ ಪಿ ಆರೀಫ್ (40) ಎಂದು ಗುರುತಿಸಲಾಗಿದೆ.
ನೆತ್ತಿಲಪದವು ಸೈಟ್ ಕಂಬಳ ನಡೆಸುವ ಜಾಗದ ಬಳಿ ಅಕ್ರಮವಾಗಿ ಮೆಥಾಂಪೆಟಾಮೈನ್ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಇಬ್ಬರ ಆರೋಪಿಗಳನ್ನು ಡ್ರಗ್ಸ್ ಸಮೇತ ಬಂಧಿಸಿದ್ದಾರೆ.
ಇನ್ನು ಆರೋಪಿಗಳಿಂದ 20 ಗ್ರಾಂ ಮೆಥಾಂಪೆಟಾಮೈನ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 1,06,500 ವಶಪಡಿಸಿಕೊಳ್ಳಲಾಗಿದೆ.
