Connect with us

    LATEST NEWS

    ಹಾವನ್ನ ಹುಲ್ಲಿನಂತೆ ಜಗಿಯುತ್ತಿರುವ ಜಿಂಕೆ..ವೈರಲ್ ವಿಡಿಯೋ ನೋಡಿ ಶಾಕ್

    ಪಕ್ಕಾ ಸಸ್ಯಹಾರಿಯಾಗಿರು ಜಿಂಕೆ ಹಾವೊಂದನ್ನು ಜಗಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಎಲ್ಲಿ ನಡೆದಿದೆ ಅನ್ನೊದು ಮಾತ್ರ ತಿಳಿದು ಬಂದಿಲ್ಲ, ಆದರೆ ಹುಲ್ಲನ್ನು ಜಗಿಯುಂತೆ ಹಾವನ್ನು ಜಿಂಕೆ ತಿನ್ನುತ್ತಿರುವುದು ಮಾದ್ರ ಎಲ್ಲರಿಗೂ ಶಾಕ್ ನೀಡಿದೆ.


    ಜಿಂಕೆಗಳು ಶುದ್ಧ ಸಸ್ಯಹಾರಿ ಪ್ರಾಣಿಗಳು, ಕಾಡುಗಳಲ್ಲಿ ಹಸಿರು ಹುಲ್ಲನ್ನು ಗಿಡ ಪೊದೆಗಳಲ್ಲಿ ಬೆಳೆದ ಹಸಿರು ಚಿಗುರೆಲೆಗಳನ್ನು ತಿಂದು ಇವು ಬದುಕುತ್ತವೆ. ಆದರೆ ನಮ್ಮ ಈ ನಂಬಿಕೆಯನ್ನೇ ಇಲ್ಲೊಂದು ಜಿಂಕೆ ಬುಡಮೇಲು ಮಾಡಿದ್ದು, ಕಂದು ಜಿಂಕೆಯೊಂದು ಹಾವನ್ನು ಹುಲ್ಲಿನಂತೆ ಬಾಯಲ್ಲಿ ಜಗಿಯುತ್ತಿದೆ.


    @TheFigen_ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಾನು ಜಿಂಕೆಯೊಂದು ಹಾವನ್ನು ತಿನ್ನುತ್ತಿರುವುದನ್ನು ಮೊದಲ ಬಾರಿ ನೋಡುತ್ತಿದ್ದೇನೆ. ಇವುಗಳಿಗೆ ಹುಲ್ಲು ನೀಡುತ್ತಿಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. 21 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಹಾವನ್ನು ಜಿಂಕೆ ಬಬಲ್‌ಗಮ್ ತರ ಜಗಿಯುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ನೋಡಿದ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
    ಸ್ಥಳೀಯರೊಬ್ಬರು ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿ ನಡೆಯಿತು.. ಯಾರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂಬ ಅಂಶ ಬಯಲಾಗಿಲ್ಲವಾದರೂ ಜಿಂಕೆಯ ನಡೆ ಮಾತ್ರ ಸ್ವತಃ ಅರಣ್ಯಾಧಿಕಾರಿಗಳೇ ಹೌಹಾರುವಂತೆ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply