Connect with us

LATEST NEWS

ಜಿಲ್ಲೆಯಲ್ಲಿ ಮುಂದುವರೆದ ಸಾವಿನ ಸರಣಿ

Share Information

ಜಿಲ್ಲೆಯಲ್ಲಿ ಮುಂದುವರೆದ ಸಾವಿನ ಸರಣಿ

ಮಂಗಳೂರು, ಸೆಪ್ಟೆಂಬರ್ 17: ಸಮುದ್ರದಲ್ಲಿ ಆಟವಾಡಲು ತೆರಳಿದ ವಿದ್ಯಾರ್ಥಿ ನೀರುಪಾಲದ ಘಟನೆ ಮಂಗಳೂರಿನ ಪಣಂಬೂರಿನ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಂಗಳೂರ ಮೂಲದ ವಿಧ್ಯಾರ್ಥಿ ಸಾಯಿಚರಣ್ ತನ್ನ 10 ಮಂದಿ ಸ್ನೇಹಿತರೊಂದಿಗೆ ಬೈಕಂಪಾಡಿಯ ನವಜ್ಯೋತಿ ಕಡಲ ಕಿನಾರೆಗೆ ತೆರಳಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದಾರೆ. ಇದರಲ್ಲಿ ಒರ್ವ ವಿದ್ಯಾರ್ಥಿ ನೀರುಪಾಲಾಗಿದ್ದಾನೆ. ನೀರುಪಾಲಾದವನು ಬೆಂಗಳೂರು ಮೂಲದ ಸಾಯಿಚರಣ್ ಎಂದು ಗುರುತಿಸಲಾಗಿದೆ. ಪಣಂಬೂರು ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗಷ್ಟೆ 3 ಇಂಜಿನಿಯರಿಂಗ್ ವಿಧ್ಯಾರ್ಥಿಗಳು ನದಿಗೆ ಈಜಲು ತೆರಳಿ ನೀರುಪಾಲಾಗಿದ್ದರು, ವಿಧ್ಯಾರ್ಥಿಗಳು ಹಾಗೂ ಪ್ರವಾಸಿಗರು ಜಿಲ್ಲೆಯ ನದಿ ಅಥವಾ ಸಮುದ್ರಕ್ಕೆ ಈಜಲು ತೆರಳಿ ನೀರುಪಾಲಾಗುತ್ತಿರುವ ಆತಂಕಕಾರಿ ಸಂಗತಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಯೋಚಿಸುವ ಅಗತ್ಯ ಇದೆ.


Share Information
Advertisement
Click to comment

You must be logged in to post a comment Login

Leave a Reply