Connect with us

    LATEST NEWS

    ಕಾರ್ಕಳ – ಕೆರೆಗೆ ಬಿದ್ದು ತಾಯಿ ಮಗು ಸಾವು

    ಕಾರ್ಕಳ ಅಗಸ್ಟ್ 02: ತಾಯಿ ಹಾಗೂ 3 ವರ್ಷದ ಮಗು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನಪ್ಪಿರುವ ಘಟನೆ ಕಾರ್ಕಳದ ಕೆರ್ವಾಶೆ ಎಂಬಲ್ಲಿ ನಡೆದಿದೆ. ಮೃತರನ್ನು ಕೆರ್ವಾಶೆ ಗ್ರಾಮದ ಕಡ್ಪಾಲ್ ವಾಸಿಗಳಾದ ಸೌಮ್ಯ(37) ಹಾಗೂ ಅವರ ಮಗ ಆರೂಷ್(3) ಎಂದು ಗುರುತಿಸಲಾಗಿದೆ.

    ಸೌಮ್ಯ ಜುಲೈ 31 ರಂದು ಮಧ್ಯಾಹ್ನ 1.30ಕ್ಕೆ ಎಂದಿನಂತೆ ಟೈಲರಿಂಗ್ ಕಲಿಯಲೆಂದು ಮನೆಯಿಂದ ಹೊರಟಿದ್ದು, ಈ ಸಂದರ್ಭ ತನ್ನ ಮಗ 3 ವರ್ಷದ ಆರೂಷ್‌ನನ್ನು ಕರೆದುಕೊಂಡು ಹೋಗಿದ್ದರು. ಆದರೆ ಸಂಜೆ 6.30 ಸಮಯವಾದರೂ ಅವರಿಬ್ಬರು ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಗಾಬರಿಗೊಂಡ ಸೌಮ್ಯಳ ತಂಗಿ ಸರಿತಾ ಅವರಿಬ್ಬರನ್ನು ಹುಡುಕುತ್ತಾ ಹೋದಾಗ ಮಡಿವಾಳಕಟ್ಟೆಯ ಕೆರೆಯ ನೀರಿನಲ್ಲಿ ಆರೂಷ್ ಧರಿಸಿದ ಚಪ್ಪಲಿ ನೀರಿನಲ್ಲಿ ತೇಲಾಡುತ್ತಿತ್ತು.

    ಕೆರೆಯಲ್ಲಿ ಹುಡುಕಾಡಿದಾಗ ಸೌಮ್ಯ ಹಾಗೂ ಆರೂಷ್ ಅವರಿಬ್ಬರ ಮೃತದೇಹ ಪತ್ತೆಯಾಗಿದೆ. ಕೆರೆಯ ಬದಿಯಲ್ಲಿರುವ ದಾರಿ ಮೂಲಕ ಅವರ ಮನೆಯ ಕಡೆಗೆ ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *