Connect with us

    LATEST NEWS

    ಲಕ್ನೋ – ಮಧ್ಯರಸ್ತೆಯಲ್ಲಿ ಟ್ಯಾಕ್ಸಿ ಚಾಲಕನನ್ನು ಥಳಿಸಿದ ಯುವತಿ – ವಿಡಿಯೋ ವೈರಲ್

    ಲಕ್ನೋ ಅಗಸ್ಟ್ 2: ಟ್ಯಾಕ್ಸಿ ಚಾಲಕನ ನನಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಚಾಲಕನಿಗೆ ನಡು ರಸ್ತೆಯಲ್ಲಿ ಕೆನ್ನೆಗೆ ಬಾರಿಸುತ್ತಿರುವ ಘಟನೆ ಲಕ್ನೋದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೂಡಲೇ ಯುವತಿಯನ್ನು ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಲಾಗಿದೆ.

    ಟ್ವೀಟರ್ ನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಮೆಗಾ ಅಪ್‌ಡೇಟ್ಸ್ ಎಂಬ ಹೆಸರಿನ ಹ್ಯಾಂಡಲ್ ಈ ವಿಡಿಯೋವನ್ನು ಮೊದಲು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಉತ್ತರ ಪ್ರದೇಶದ ಲಕ್ನೋದಲ್ಲಿ ಅವಧ್ ಕ್ರಾಸಿಂಗ್‌ನಲ್ಲಿ ಒಬ್ಬ ಹುಡುಗಿ ಕ್ಯಾಬ್ ಚಾಲಕನನ್ನು ನಿರಂತರವಾಗಿ ಥಳಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ ಅಲ್ಲದೆ ಆಕೆ ಆತ ತನ್ನ ಫೋನ್ ಅನ್ನು ಹಾಳು ಮಾಡಿದನೆಂದು ಆರೋಪಿಸಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಬಂದರೂ ಅವರಿಗೂ ಕ್ಯಾರೆ ಮಾಡದೇ ಚಾಲಕನಿಗೆ ಥಳಿಸಿದ್ದು, ಕ್ಯಾಬ್ ಚಾಲಕನನ್ನು ರಕ್ಷಿಸಲು ಬಂದ ಇನ್ನೊಬ್ಬ ವ್ಯಕ್ತಿಯ ಮೇಲೂ ಹಲ್ಲೆ ನಡೆಸಲಾಗಿದೆ.


    ಮತ್ತೊಂದು ವಿಡಿಯೋದಲ್ಲಿ ಯುವತಿ ಟ್ರಾಫಿಕ್ ಮಧ್ಯೆ ರಸ್ತೆ ಕ್ರಾಸ್ ಮಾಡಲು ಪ್ರಯತ್ನಿಸಿದ್ದಾಳೆ. ಆದರೆ ಅಷ್ಟರಲ್ಲಿ ರೆಡ್ ಸಿಗ್ನಲ್ ಬಿದ್ದಿದ್ದು ಟ್ಯಾಕ್ಸಿ ಚಾಲಕ ಯುವತಿ ಎದುರೇ ಗಾಡಿ ನಿಲ್ಲಿಸಿದ್ದಾನೆ. ಆದರೆ ಆಕೆ ಕಾರು ಚಾಲಕನ ನನಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಿ ಚಾಲಕನಿಗೆ ಥಳಿಸಿದ್ದಾಳೆ.

    Share Information
    Advertisement
    Click to comment

    You must be logged in to post a comment Login

    Leave a Reply