Connect with us

    LATEST NEWS

    ಪ್ರತಿ ದಿನ ನಾಯಿ ಮೂತ್ರ ಕುಡೀರಿ, ನಳನಳಿಸುವ ತ್ವಚೆ ಪಡೆಯಿರಿ..!?

    ವಾಷಿಂಗ್ಟನ್, ಜನವರಿ 15​: ಸುಂದರವಾಗಿ ಚೆನ್ನಾಗಿ ಕಾಣಬೇಕೆಂಬ ಆಸೆ ಯಾರಿಗಿಲ್ಲ ಹೇಳಿ? ಪುರುಷರಾಗಲಿ, ಮಹಿಳೆಯರಾಗಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸುಂದರವಾಗಿ ಕಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಕೆಲವರು ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೆ, ಹಲವರು ಸುಂದರ ತ್ವಚೆಗಾಗಿ ಮಾಡದ ಸರ್ಕಸ್​ಗಳೇ ಇಲ್ಲ ಎನ್ನಬಹುದು.

    ಇತ್ತೀಚೆಗೆ ಗೋಮೂತ್ರ ಕುಡಿಯುವುದರಿಂದ ಹಲವಾರು ಕಾಯಿಲೆಗಳನ್ನು ವಾಸಿ ಮಾಡಬಲ್ಲುದು ಎಂದು ಕೇಳಿರುತ್ತೀರಿ. ಹೌದು ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇನ್ನು ಕೆಲವರು ಸ್ವಮೂತ್ರವನ್ನೂ ಕುಡಿಯುತ್ತಾರೆ. ಇದರ ಬಗ್ಗೂ ನೀವು ಕೇಳಿರಬಹುದು. ಆದರೆ ನಾಯಿಯ ಮೂತ್ರ ಕುಡಿಯುವುದನ್ನು ಕೇಳಿದ್ದೀರಾ?

    ಇದು ನಿಮಗೆ ವಿಚಿತ್ರ ಅನಿಸಿದ್ರು ನಂಬಲೇ ಬೇಕು. ಆದರೆ ಈ ಫೋಟೋದಲ್ಲಿ ಕಾಣುತ್ತಿರುವ ಯುವತಿಯ ಸೌಂದರ್ಯದ ಗುಟ್ಟು ಇದೇ ಮೂತ್ರವಂತೆ! ಅಚ್ಚರಿ ಎನಿಸುತ್ತದೆ ಅಲ್ವಾ? ಆದರೆ ಈಕೆ ತನ್ನ ಕಲೆ ರಹಿತ, ನಳನಳಿಸುವ ತ್ವಚೆಯ ಗುಟ್ಟನ್ನು ಬಿಟ್ಟುಕೊಟ್ಟಿದ್ದು, ತಾನು ಪ್ರತಿನಿತ್ಯವೂ ನಾಯಿಯ ಮೂತ್ರವನ್ನು ಕುಡಿಯುವುದಾಗಿ ಹೇಳಿದ್ದಾಳೆ.

    ಅಂದಹಾಗೆ ಅಮೆರಿಕದ ಈ ಯುವತಿಯ ಹೆಸರು ಲೀನಾ. ನಾನು ನಾಯಿ ಸಾಕಿದ್ದು, ಅದರ ಮೂತ್ರವನ್ನು ನಿಯಮಿತವಾಗಿ ಕುಡಿಯುತ್ತಿದ್ದೇನೆ. ನಾಯಿ ಮೂತ್ರದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಗುಣಗಳಿವೆ ಎಂದು ಹೇಳಿಕೊಂಡಿದ್ದಾಳೆ ಲೀನಾ. ನಾಯಿಯ ಮೂತ್ರವನ್ನು ಕುಡಿಯುವುದರಿಂದ ಕ್ಯಾನ್ಸರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ತಪ್ಪಿಸಬಹುದು ಎನ್ನುತ್ತಾಳೆ ಈಕೆ.

    ಕೆಲವು ವಾರಗಳ ಹಿಂದೆ ತನ್ನ ಮುಖದ ಮೇಲೆ ಅಸಹ್ಯ ರೀತಿಯಲ್ಲಿ ಗುಳ್ಳೆಗಳು ಆಗಿದ್ದವು. ಯಾರೋ ನೀಡಿದ್ದ ಸಲಹೆಯಂತೆ ನನ್ನ ಸಾಕುನಾಯಿ ಮೂತ್ರ ಕುಡಿಯಲು ಶುರು ಮಾಡಿದೆ. ಮೊದಮೊದಲ ವಿಚಿತ್ರ ಎನಿಸಿದರೂ, ಕ್ರಮೇಣ ಗುಳ್ಳೆಗಳೆಲ್ಲಾ ಮಾಯವಾಗಿ ಇದೀಗ ಸುಂದರಿಯಾಗಿ ಕಾಣಿಸುತ್ತಿದ್ದೇನೆ ಎಂದಿದ್ದಾಳೆ.

    Share Information
    Advertisement
    Click to comment

    You must be logged in to post a comment Login

    Leave a Reply