Connect with us

LATEST NEWS

ಕೂಲಿ ಕಾರ್ಮಿಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ ಕರಡಿ

ಉಡುಪಿ ಜನವರಿ 16: ಕಾರ್ಕಳದ ಹೆಬ್ರಿ ಕಬ್ಬಿನಾಲೆ ಪರಿಸರದಲ್ಲಿ ಕರಡಿಯೊಂದು ಕೂಲಿ ಕಾರ್ಮಿಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದೆ.


ಕರಡಿ ದಾಳಿ ಒಳಗಾದ ಕೂಲಿ ಕಾರ್ಮಿಕನನ್ನು ಮತ್ತಾವು ನಿವಾಸಿ ರಾಮಕೃಷ್ಣ ಗೌಡ ಎಂದು ಗುರುತಿಸಲಾಗಿದೆ. ಪಶ್ಚಿಮಘಟ್ಟ ತಪ್ಪಲಿನಲ್ಲಿರುವ ಕಬ್ಬಿನಾಲೆ ಪರಿಸರದಲ್ಲಿ ಇತ್ತೀಚೆಗೆ ಕರಡಿ ಹಾವಳಿ ಹೆಚ್ಚಾಗಿದೆ. ಕೂಲಿ ಕಾರ್ಮಿಕರಾಗಿರುವ ರಾಮಕೃಷ್ಣ ಅವರ ಮೇಲೆ ಕರಡಿ ಭಯಾನಕ ದಾಳಿ ನಡೆಸಿದೆ, ಕರಡಿ ದಾಳಿಗೆ ರಾಮಕೃಷ್ಣ ಗೌಡ ಅವರ ಕಾಲು ಹಾಗೂ ಪಾದಕ್ಕೆ ಗಂಭೀರವಾಗಿ ಗಾಯವಾಗಿದ್ದು, ಹೆಬ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಈ ಕರಡಿ ದಾಳಿಯಿಂದಾಗಿ ಕಬ್ಬಿನಾಲೆ ಪರಿಸರದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಕಾಡುಪ್ರಾಣಿಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Facebook Comments

comments