LATEST NEWS
ಅಸೌಖ್ಯದ ನಾಟಕವಾಡಿ ಅಂಬ್ಯುಲೆನ್ಸ್ ನಲ್ಲಿ ಊರಿಗೆ ಬಂದವನಿಗೆ 14 ದಿನ ಗೃಹ ಬಂಧನ

ಅಸೌಖ್ಯದ ನಾಟಕವಾಡಿ ಅಂಬ್ಯುಲೆನ್ಸ್ ನಲ್ಲಿ ಊರಿಗೆ ಬಂದವನಿಗೆ 14 ದಿನ ಗೃಹ ಬಂಧನ
ಸುಬ್ರಹ್ಮಣ್ಯ ಮಾರ್ಚ್ 30: ಅಸೌಖ್ಯದ ನಾಟಕವಾಗಿ ಅಂಬ್ಯುಲೆನ್ಸ್ ಮೂಲಕ ಊರಿಗೆ ಬಂದ ಯುವಕನನ್ನು 14 ಗೃಹಬಂಧನದಲ್ಲಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ದ ಐವತ್ತೋಕ್ಲು ಎಂಬಲ್ಲಿ ನಡೆದಿದೆ.
ಯುವಕನನ್ನು ಸುಬ್ರಹ್ಮಣ್ಯ ಸಮೀಪದ ಐವತ್ತೋಕ್ಲು ನಿವಾಸಿ ವಿಜಯಕುಮಾರ್ ಎಂದು ಗುರುತಿಸಲಾಗಿದ್ದು, ಈತ ರಾಯಚೂರಿನಲ್ಲಿ ಉದ್ಯೋಗದಲ್ಲಿದ್ದು ಲಾಕ್ ಡೌನ್ ಹಿನ್ನಲೆ ಊರಿಗೆ ಬರಲು ಈ ನಾಟಕವಾಡಿದ್ದ ಎಂದು ತಿಳಿದು ಬಂದಿದೆ.

ಈತ ರಾಯಚೂರಿನಿಂದ ಕುಂದಾಪುರ ತನಕ ಬೇರೆ ವಾಹನದ ಮೂಲಕ ಬಂದಿದ್ದು, ನಂತರ ಕುಂದಾಪುರದಿಂದ ಇಂದು ಬಾಡಿಗೆಗೆ ಅಂಬ್ಯುಲೆನ್ಸ್ ಬುಕ್ ಮಾಡಿ ವೈದ್ಯರಿಂದ ಕಿಡ್ನಿ ಸ್ಟೋನ್ ರೋಗಿ ಎನ್ನುವ ಸರ್ಟಿಫಿಕೇಟ್ ಮಾಡಿಸಿಕೊಂಡು ಮನೆಗೆ ವಾಪಾಸ್ಸಾಗಿದ್ದಾನೆ.
ಊರಿಗೆ ಅಂಬ್ಯುಲೆನ್ಸ್ ನಲ್ಲಿ ಬಂದ ಹಿನ್ನಲೆ, ರೋಗಿ ಎಂದು ಭಾವಿಸಿ ಗ್ರಾಮಸ್ಥರು ಅಂಬ್ಯುಲೆನ್ಸ್ ನ್ನು ತಡೆ ಹಿಡಿದಿದ್ದಾರೆ. ನಂತರ ಈ ವಿಚಾರಿಸಿದಾಗ ಈ ಯುವಕ ನಾಟಕ ಬಯಲಿಗೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಪೋಲೀಸರು ಯುವಕನ ವಿಚಾರಣೆ ನಡೆಸಿದ್ದು, ಆರೋಗ್ಯ ಅಧಿಕಾರಿಗಳು ಯುವಕನಿಗೆ 14 ದಿನ ಹೋಮ್ ಕ್ವಾರೆಂಟಿನಲ್ಲಿರುವ ಸೂಚಿಸಿದ್ದಾರೆ.