Connect with us

    LATEST NEWS

    ನಾಳೆ ಬೆಳಿಗ್ಗೆ 6 ರಿಂದ 3 ಗಂಟೆಯವರೆಗೆ ದಿನಸಿ ಸಾಮಾಗ್ರಿ ಖರೀದಿಗೆ ಅವಕಾಶ

    ನಾಳೆ ಬೆಳಿಗ್ಗೆ 6 ರಿಂದ 3 ಗಂಟೆಯವರೆಗೆ ದಿನಸಿ ಸಾಮಾಗ್ರಿ ಖರೀದಿಗೆ ಅವಕಾಶ

    ಪುತ್ತೂರು ಮಾರ್ಚ್ 30: ನಾಳೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಜನರಿಗೆ ದಿನಸಿ ಸಾಮಾಗ್ರಿ ಖರೀದಿಗೆ ಅವಕಾಶ ನೀಡಲಾಗಿದ್ದು, ಒಂದು ಮನೆಯಿಂದ ಒಬ್ಬರಿಗೆ ಮಾತ್ರ ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

    ಅಲ್ಲದೆ ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯವಾಗಿದ್ದು, ದಿನಸಿ ಅಂಗಡಿಯ ಪರವಾನಗಿ ಇರುವ ಎಲ್ಲಾ ಅಂಗಡಿಗಳು ಕಡ್ಡಾಯವಾಗಿ ತೆರೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಪುತ್ತೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಎಪ್ರಿಲ್ 2 ರಿಂದ ಜಿಲ್ಲೆಯಲ್ಲಿ ಪಡಿತರ ಅಂಗಡಿಗಳ ರೇಷನ್ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ 2.71 ಲಕ್ಷ ರೇಷನ್ ಕಾರ್ಡ್ ಹೊಂದಿರುವವರಿಗೆ ರೇಷನ್ ವಿತರಣೆಗೆ ರೇಷನ್ ಅಂಗಡಿಯಲ್ಲಿ ಒಂದು ದಿನಕ್ಕೆ ನಿರ್ದಿಷ್ಟ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದವರು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply