LATEST NEWS
ಕಝಾಕಿಸ್ತಾನ ವಿಮಾನ ಪತನ – 38ಕ್ಕೂ ಅಧಿಕ ಮಂದಿ ಸಾವು – ಕೊನೆ ಕ್ಷಣದ ವಿಡಿಯೋ ವೈರಲ್
ಕಝಾಕಿಸ್ತಾನ ಡಿಸೆಂಬರ್ 25: ರಷ್ಯಾಗೆ ತೆರಳುತ್ತಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ಪ್ಯಾಸೆಂಜರ್ ವಿಮಾನ ಕಝಾಕಿಸ್ತಾನದಲ್ಲಿ ಬುಧವಾರ ಪತನಗೊಂಡಿತು. ಈ ಘಟನೆಯಲ್ಲಿ 38ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಪೈಲಟ್ ತುರ್ತು ಲ್ಯಾಂಡಿಂಗ್ ಮಾಡುವ ವೇಳೆ ನೆಲಕ್ಕೆ ರಭಸವಾಗಿ ಅಪ್ಪಳಿಸಿ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತು. ವಿಮಾನ ಅಜರ್ಬೈಜಾನ್ನ ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು.ವಿಮಾನದಲ್ಲಿ 69 ಮಂದಿ ಪ್ರಯಾಣಿಕರಿದ್ದರು. ಅಪಘಾತದಲ್ಲಿ 38 ಜನರು ಸಾವನ್ನಪ್ಪಿದ್ದಾರೆ ಎಂದು ಕಝಕ್ ಅಧಿಕಾರಿಗಳು ತಿಳಿಸಿದ್ದಾರೆ.
One of the passengers on #Azerbaijan #airlines Flight #J28243 sent a video to his wife just minutes before the crash. The man in this video survived. His wife says he’s being treated for a wound on his face. #PlaneCrash #Azerbaijan #Kazakistan pic.twitter.com/RD1XxZ3Zw3
— Saleem Iqbal Qadri (@SaleemQadri_) December 25, 2024