Connect with us

    LATEST NEWS

    ಅತಿ ವೇಗದ ದ್ವಿಶತಕ ಭಾರಿಸಿದ ಇಶಾನ್ ಕಿಶನ್…..!!

    ದೆಹಲಿ ಡಿಸೆಂಬರ್ 10: ಬಾಂಗ್ಲಾದೇಶದ ಎದುರು ಅತಿ ಹೀನಾಯ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಇಂದು ವಿಶ್ವದಾಖಲೆ ನಿರ್ಮಿಸಿದ್ದು, ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಸಿಡಿಸಿ ಇಂದು ದಾಖಲೆ ಬರೆದಿದ್ದಾರೆ.


    24ರ ಹರೆಯದ ಇಶಾನ್‌ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 126 ಎಸೆತಗಳಲ್ಲಿ 200 ರನ್‌ ಗಳಿಸಿದರು. ಈ ಹಿಂದೆ, 2015ರಲ್ಲಿ ವೆಸ್ಟ್‌ ಇಂಡೀಸ್‌ ಆಟಗಾರ ಕ್ರಿಸ್‌ ಗೇಲ್‌ ಅವರು, ಜಿಂಬಾಬ್ವೆ ವಿರುದ್ಧ 138 ಎಸೆತಗಳಲ್ಲಿ ದ್ವಿಶತಕ ಸಾಧನೆ ಮಾಡಿದ್ದರು. ಇಂದು ಇಶಾನ್‌ ಕಿಶನ್‌ ಆ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.


    ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಏಳನೇ ಬ್ಯಾಟರ್ ಇಶಾನ್ ಎನಿಸಿಕೊಂಡಿದ್ದಾರೆ. ಬಾಂಗ್ಲಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್‌ 131 ಬಾಲ್‌ಗಳಲ್ಲಿ ಒಟ್ಟು 210 ರನ್‌ ಗಳಿಸಿದರು. ಇಶಾನ್‌ ದ್ವಿಶತಕದ ನೆರವಿನೊಂದಿಗೆ ಭಾರತ 50 ಓವರ್‌ಗಳಲ್ಲಿ 330ರನ್‌ ಗಳಿಸಿದೆ. ಇದೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ಔಟಾಗದೇ 113 (90) ರನ್‌ ಗಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply