LATEST NEWS
ಮಹಾರಾಷ್ಟ್ರ – ಬಿಜೆಪಿಗೆ ಏಕನಾಥ್ ಶಿಂಧೆ ವಾರ್ನಿಂಗ್ ನನ್ನನ್ನು ಲಘುವಾಗಿ ಪರಿಗಣಿಸಬೇಡಿ ನಾನು ಬಾಳಾಸಾಹೇಬರ ಕಾರ್ಯಕರ್ತ

ಮುಂಬೈ ಫೆಬ್ರವರಿ 21: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆಯ ನಡುವೆ ಪರಿಸ್ಥಿತಿ ಸರಿಯಿಲ್ಲ ಎಂಬ ವರದಿಗೆ ಇದೀಗ ಪುಷ್ಠಿ ಸಿಕ್ಕಂತಾಗಿದೆ. ಸ್ವತಃ ಡಿಸಿಎಂ ಏಕನಾಥ್ ಶಿಂಧೆ ಬಿಜೆಪಿಗೆ ವಾರ್ನಿಂಗ್ ಕೊಟ್ಟಿದ್ದು, ‘ನನ್ನನ್ನು ಲಘುವಾಗಿ ಪರಿಗಣಿಸಬೇಡಿ ನಾನು ಬಾಳಾಸಾಹೇಬರ ಕಾರ್ಯಕರ್ತ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು 2022ರಲ್ಲಿ ತನ್ನನ್ನು ಕಡೆಗಣಿಸಿದ್ದರಿಂದ ರಾಜ್ಯ ಸರ್ಕಾರವನ್ನು ಪತನಗೊಳಿದ್ದೆ, “ನನ್ನನ್ನು ಲಘುವಾಗಿ ಪರಿಗಣಿಸಬೇಡಿ; ನನ್ನನ್ನು ಯಾರು ಲಘುವಾಗಿ ಪರಿಗಣಿಸಿದ್ದರೂ ಅವರಿಗೆ ಈಗಾಗಲೇ ಹೇಳಿದ್ದೇನೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರಬಹುದು, ಆದರೆ ನಾನು ಬಾಳಾಸಾಹೇಬರ ಕಾರ್ಯಕರ್ತ, ಎಲ್ಲರೂ ಅದನ್ನು ಅರ್ಥಮಾಡಿಕೊಳ್ಳಬೇಕು. 2022 ರಲ್ಲಿ ನನ್ನನ್ನು ಲಘುವಾಗಿ ತೆಗೆದುಕೊಂಡಾಗ ಸರ್ಕಾರವನ್ನು ಪತನಗೊಳಿಸಿದೆ. ಜನರ ಇಚ್ಛೆಯನ್ನು ಪ್ರತಿಬಿಂಬಿಸುವ ಸರ್ಕಾರವನ್ನು ತಂದೇವು ಎಂದು ಹೇಳಿದರು.

ಭಿನ್ನಾಭಿಪ್ರಾಯದಿಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರೆದಿದ್ದ ಸಭೆಗೆ ಏಕನಾಥ್ ಶಿಂಧೆ ಗೈರಾಗಿದ್ದರು ಎಂದು ಊಹಾಪೋಹಗಳು ಹರಿದಾಡಿವೆ. 2022 ರಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ಆಗಿನ ಸರ್ಕಾರವನ್ನು ಪತನಗೊಳಿಸಿದ್ದ ಶಿಂಧೆ, ಶಿವಸೇನೆಯನ್ನು ಇಬ್ಬಾಗಿಸಿದ್ದರು. ತದನಂತರ ಬಿಜೆಪಿಯೊಂದಿಗೆ ಸೇರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಆದರೆ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಳಿಕ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾಯಿತು.