LATEST NEWS
ಬಾವಿಗಿಳಿದು ನಾಯಿ ರಕ್ಷಿಸಿದ ಮಹಿಳೆ ವಿಡಿಯೋ ವೈರಲ್

ಬಾವಿಗಿಳಿದು ನಾಯಿ ರಕ್ಷಿಸಿದ ಮಹಿಳೆ ವಿಡಿಯೋ ವೈರಲ್
ಮಂಗಳೂರು ಜನವರಿ 31: ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಲ್ಲಾಳಬಾಗ್ ಸಮೀಪದ ಬಾವಿಯೊಂದರಲ್ಲಿ ನಾಯಿಯೊಂದು ಬಿದ್ದಿತ್ತು.
ನಾಯಿ ನೀರಿನಲ್ಲಿ ಒದ್ದಾಡುವುದನ್ನು ಕಂಡ ಬಲ್ಲಾಳ್ ಬಾಗ್ ನ ರಜನಿ ಶೆಟ್ಟಿ ಎಂಬವರು ಇಳಿದು ನಾಯಿಯನ್ನು ರಕ್ಷಿಸಿದ್ದಾರೆ. ಹಗ್ಗದ ಸಹಾಯದಿಂದ ಬಾವಿಗಿಳಿದು ನಾಯಿಯನ್ನು ರಕ್ಷಿಸಿದ ವಿಡಿಯೋ ಈಗ ವೈರಲ್ ಆಗಿದೆ.

VIDEO
Continue Reading