KARNATAKA
ಕ್ರೆಡಿಟ್ ಕಾರ್ಡ್ ನಿಂದ ಹೇಗೆ 9,600 ರೂಪಾಯಿ ಹಣ ಸಂಪಾದನೆ ಮಾಡಬಹುದು ಗೊತ್ತಾ ?
ಕ್ರೆಡಿಟ್ ಕಾರ್ಡ್ ಬಗ್ಗೆ ನಾವು ಬಹಳಷ್ಟು ವಿಷಯಗಳನ್ನು ತಿಳಿದಿದ್ದೇವೆ. ಆದರೆ ಕ್ರೆಡಿಟ್ ಕಾರ್ಡ್ ನಿಂದಲೂ ದುಡ್ಡು ಹೇಗೆ ಸಂಪಾದಿಸುವುದು ಅಂತ ಯೋಚನೆ ಮಾಡಿದ್ದೀರಾ ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ. ಹೌದು ಕ್ರೆಡಿಟ್ ಕಾರ್ಡ್ ನಿಂದ ದುಡ್ಡು ಸಂಪಾದಿಸಬಹುದು. ನಾನು ಕರೆಕ್ಟ್ ಆಗಿಯೇ ಹೇಳ್ತಾ ಇದ್ದೇನೆ.”ಇವನು ಯಾರಪ್ಪ..ನಾವೆಲ್ಲ ಕ್ರೆಡಿಟ್ ಕಾರ್ಡ್ ನಿಂದ ನಾವು ದುಡ್ಡು ಕಳ್ಕೊಳ್ತಾ ಇದ್ರೆ, ದುಡ್ಡು ಸಂಪಾದಿಸಬಹುದು ಅಂತ ಹೇಳ್ತಾ ಇದ್ದಾನೆ” ಅಂತ ಯೋಚನೆ ಮಾಡ್ತಾ ಇದ್ದೀರಾ ? ಹಾಗಾದರೆ ಹೇಗೆ ದುಡ್ಡು ಸಂಪಾದನೆ ಮಾಡಬಹುದು ನೋಡೋಣ ಬನ್ನಿ.
1. ಕ್ರೆಡಿಟ್ ಕಾರ್ಡ್ ಗೆ ಯಾವತ್ತೂ ಕ್ರೆಡಿಟ್ ರೇಟಿಂಗ್ಸ್ ಅಂತ ಇರುತ್ತದೆ. ಇದನ್ನು 750 ರಿಂದ 900 ಪಾಯಿಂಟ್ ಗಳ ನಡುವೆ ಅಳೆಯುತ್ತಾರೆ. ನೀವು ನಿಮ್ಮ ಕ್ರೆಡಿಟ್ ಕಾರ್ಡ್ನಲ್ಲಿರುವ ಸಾಲವನ್ನು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಬೇಕು. ಆದರೆ ಪಾವತಿ ಮಾಡುವಾಗ ಕಾರ್ಡ್ ನಲ್ಲಿರುವ ಎಲ್ಲಾ ಸಾಲವನ್ನು ಒಟ್ಟಿಗೆ ಅಂತಿಮ ದಿನಾಂಕದ ಒಳಗೆಯೇ ಮರುಪಾವತಿ ಮಾಡಬೇಕು. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಜಾಸ್ತಿಯಾಗುತ್ತ ಹೋಗುತ್ತದೆ. ಮುಂದೆ ನಿಮಗೆ ಮನೆ ಸಾಲ, ವಾಹನ ಸಾಲ ಅಥವಾ ಇತರ ಯಾವದೇ ಸಾಲ ಬೇಕೆಂದಿದ್ದರೆ ಬೇಗ ನಿಮಗೆ ಸಾಲವನ್ನು ಮಂಜೂರು ಮಾಡುತ್ತಾರೆ ಹಾಗೆಯೇ ಕಡಿಮೆ ಬಡ್ಡಿ ದರದಲ್ಲಿಯೂ ಸಾಲ ಕೊಡುತ್ತಾರೆ. ಬಡ್ಡಿ ಕಡಿಮೆಯಾದರೆ ಆ ದುಡ್ಡನ್ನು ನೀವು ಉಳಿಸಿದಂತೆ ಹಾಗೂ ಗಳಿಸಿದಂತೆ.
2. ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಸಾಮಾನ್ಯವಾಗಿ 30 ರಿಂದ 45 ದಿನದ ವರೆಗೆ ಬಡ್ಡಿಯಿಲ್ಲದೆ ಸಾಲ ಪಡೆಯಬಹುದು. ನಿಮ್ಮ ತಿಂಗಳ ಅಂದಾಜು ಖರ್ಚನ್ನು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಾಗೆಯೇ ತೆಗೆದು ಇಡಿ. ನಿಮ್ಮ ಸೇವಿಂಗ್ಸ್ ಅಕೌಂಟ್ ನಲ್ಲಿ ಎಷ್ಟು ದುಡ್ಡಿದೆ ಅದಕ್ಕಿಂತ ಹೆಚ್ಚಿನ ಖರ್ಚು ಮಾಡಬೇಡಿ. ಮತ್ತೆ ಮರುಪಾವತಿಸಲು ಕಷ್ಟ ಆಗಬಹುದು. ನಿಮ್ಮ ಎಲ್ಲಾ ಖರ್ಚು ವೆಚ್ಚವನ್ನು ಕ್ರೆಡಿಟ್ ಕಾರ್ಡ್ ನಿಂದ ಪಾವತಿಸಿ. ನೀವು ಇದಕ್ಕಿಂತ ಮೊದಲೇ ಅಂದಾಜು ಮಾಡಿ ನಿಗದಿಪಡಿಸಿದ ದುಡ್ಡನ್ನು ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನಿಂದ ತೆಗೆದು “Liquid Mutual Fund Scheme” ಲ್ಲಿ ಹೂಡಿಕೆ ಮಾಡಿ. ಉದಾಹರೆಣೆಗೆ ಈ ತಿಂಗಳ ನಿಮ್ಮ ಒಟ್ಟು ವೆಚ್ಚ 50,000 ಸಾವಿರ ರೂಪಾಯಿ ಬರಬಹುದು ಅಂತ ಭಾವಿಸಿ. ಕೂಡಲೇ ತಿಂಗಳ ಮೊದಲನೇ ದಿನ ಈ ದುಡ್ಡನ್ನು ಸೇವಿಂಗ್ಸ್ ಅಕೌಂಟ್ ನಿಂದ ತೆಗೆದು ಮೇಲೆ ತಿಳಿಸಿದ Mutual Fund scheme ನಲ್ಲಿ ಇನ್ವೆಸ್ಟ್ ಮಾಡಿ. ಇನ್ವೆಸ್ಟ್ ಮಾಡುವಾಗ ಸರಿಯಾಗಿ ತಿಳಿದುಕೊಂಡು ಒಳ್ಳೆಯ Mutual Fund scheme ಕಂಪನಿಯನ್ನು ಆಯ್ದುಕೊಳ್ಳಿ.
ಯಾಕೆ ಈ mutual fund scheme ಆಯ್ಕೆ ಮಾಡಬೇಕು ಎಂದರೆ ಇದು FD(Fixed Deposit) ಗಿಂತ ಹೆಚ್ಚಿನ ಬಡ್ಡಿ ಮೊತ್ತ ದೊರೆಯುತ್ತದೆ, ಯಾವುದೇ ಸಮಯದಲ್ಲಿ ನಿಮಗೆ ಆಯ್ಕೆಯಿಂದ ಹೊರ ಬರಬಹುದು ಅದು ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ.(ಎಕ್ಸಿಟ್ ಲೋಡ್) ಹಾಗೂ ಇದಕ್ಕೆ ತಗುಲುವ ಖರ್ಚು ಕೂಡ ಕಡಿಮೆಯೇ. ಹೀಗೆ 50,000 ಸಾವಿರವನ್ನು 1 ತಿಂಗಳಿಗೆ ಇನ್ವೆಸ್ಟ್ ಮಾಡಿದಾಗ ಕಡಿಮೆಯೆಂದರೆ 7% ಬಡ್ಡಿ ನಿಮಗೆ ದೊರೆಯುತ್ತದೆ. ಅಂದರೆ ಒಂದು ತಿಂಗಳಿಗೆ ಕಡಿಮೆಯೆಂದರೆ ಸಾಧಾರಣ 300 ರೂಪಾಯಿಯಷ್ಟು ಹಾಗೂ ವರ್ಷಕ್ಕೆ 3,600 ಗಳಿಸಬಹುದು. ಇದಕ್ಕೆ ನೀವು ಯಾವದೇ ಖರ್ಚು ಮಾಡಬೇಕಂದೆನಿಲ್ಲ ಅಥವಾ ಸರಿಯಾಗಿ ಅಧ್ಯಯನ ಮಾಡಿ ಶೇರ್ ನಲ್ಲಿ ಹೂಡಿಕೆ ಮಾಡಿದರೆ 30% ಗಳಿಸಬಹುದು. ನಂತರ ಪಾವತಿಯ ಕೊನೆ ದಿನದಂದು ನಿಮ್ಮ ಕ್ರೆಡಿಟ್ ಕಾರ್ಡ್ ನ ಒಟ್ಟು ಬಾಕಿ ಮೊತ್ತವನ್ನು mutual fund ನಿಂದ ತೆಗೆದು ಮರುಪಾವತಿ ಮಾಡಿ.
3. ಇತ್ತೀಚೆಗೆ ಕೆಲವು ಕಂಪನಿಗಳು 1/3 ಕ್ರೆಡಿಟ್ ಕಾರ್ಡನ್ನು ನೀಡುತ್ತಿದ್ದಾರೆ. ಅಂದರೆ ಮೊದಲ ತಿಂಗಳು ನೀವು 50,000 ಖರ್ಚು ಮಾಡಿದರೆ 16,667 ರೂಪಾಯಿಯಂತೆ 3 ತಿಂಗಳು ಪಾವತಿ ಮಾಡಬೇಕು. ಒಂದು ವೇಳೆ ನೀವು ಬಾಕಿ ಎಲ್ಲಾ ಮೊತ್ತವನ್ನು ಮೊದಲ ತಿಂಗಳೇ ಪಾವತಿ ಮಾಡಿದರೆ 1% ನಿಮಗೆ ಕ್ಯಾಶ್ ಬ್ಯಾಕ್ ದೊರೆಯುತ್ತದೆ.ಅಂದರೆ 50,000 ವನ್ನು ಒಟ್ಟಿಗೆ ಮರು ಪಾವತಿ ಮಾಡಿದರೆ 500 ರೂಪಾಯಿ ನಿಮಗೆ ತಿಂಗಳಿಗೆ ದೊರೆಯುತ್ತದೆ ಮತ್ತು ವರ್ಷಕ್ಕೆ 6,000 ದೊರೆಯುತ್ತದೆ. ಅಂದರೆ ನೀವು ವರ್ಷಕ್ಕೆ 9,600 ಕ್ರೆಡಿಟ್ ಕಾರ್ಡ್ ನಿಂದ ಸಂಪಾದನೆ ಮಾಡಿದಂತೆ ಆಯಿತು. ಕೆಲವರ ಖರ್ಚು ತುಂಬಾ ಕಡಿಮೆ ಇದ್ದರೆ ಇಷ್ಟೆಲ್ಲ ಸೇವಿಂಗ್ಸ್ ಮಾಡಲು ಸಾಧ್ಯವಿಲ್ಲ.
ಪೆಟ್ರೋಲ್ ಪಂಪ್ ನ ಮಾಲೀಕರು ಹೇಗೆ ಲಾಭ ಮಾಡುತ್ತಾರೆ ? ನೀವು ಪೆಟ್ರೋಲ್ ಪಂಪ್ ನ ಒಡೆಯರಾಗಬೇಕೆ?
ಅಯ್ಯೋ ಇಷ್ಟೇ ಸಂಪಾದನೆ ಮಾಡಲು ಸಾಧ್ಯವೇ ? ಅಂತ ಹಿಂಜರಿಯಬೇಡಿ. ಆದರೂ ಒಂದು ನೆನಪಿನಲ್ಲಿಡಿ. ಹನಿ ಹನಿ ಸೇರಿ ಸಾಗರ. ನೀವು ಕಷ್ಟ ಪಟ್ಟು ದುಡಿದ ಒಂದೊಂದು ರೂಪಾಯಿ ಕೂಡ ನಿಮಗೆ ಅತ್ಯಮೂಲ್ಯ. ಇನ್ನೊಂದು ಪ್ರಮುಖ ಅಂಶವೆಂದರೆ “ಹಾಸಿಗೆ ಇದ್ದಷ್ಟೇ ಕಾಲು ಚಾಚಿ” ಎನ್ನುವಂತೆ ನಿಮ್ಮಲ್ಲಿರುವ ದುಡ್ಡಿಗಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ನಲ್ಲಿ ಖರ್ಚು ಮಾಡಬೇಡಿ.
ಸಚಿನ್ ಭಟ್, ಬದಿಕೋಡಿ.