Connect with us

LATEST NEWS

ಸದಾ ಯೌವನ ಬಯಸಿರುವಿರಾ ಹಾಗಾದರೆ ಈ ಮಸಾಜ್ ಮಾಡಿಸಿಕೊಳ್ಳಿ…!

ಕೈರೊ (ಈಜಿಪ್ಟ್​), ಡಿಸೆಂಬರ್ 30: ಜೀವನ ಪೂರ್ತಿ ಸುಂದರವಾಗಿರಬೇಕು, ಮುಪ್ಪೇ ಬರಬಾರದು ಎಂದು ಯಾರು ತಾನೆ ಬಯಸಲ್ಲ ಹೇಳಿ? ಮಹಿಳೆಯರಾಗಲೀ, ಪುರುಷರಾಗಲಿ ಎಲ್ಲರಿಗೂ ಸೌಂದರ್ಯದ ಕಾಳಜಿ ಇದ್ದೇ ಇರುತ್ತದೆ. ಅದಕ್ಕಾಗಿಯೇ ಇಷ್ಟೊಂದು ಸ್ತ್ರೀಯರ, ಪುರುಷರ ಪಾರ್ಲರ್​ಗಳು ತಲೆ ಎತ್ತಿರುವುದು.

ಸೌಂದರ್ಯದ ಮಾತು ಒಂದೆಡೆಯಾದರೆ, ಇನ್ನೊಂದೆಡೆ, ಮೈಕೈ ನೋವಿನ ಸಮಸ್ಯೆ. ಸಿಕ್ಕಾಪಟ್ಟೆ ಕೆಲಸ ಮಾಡಿದಾಗ ಸುಸ್ತಾದರೆ ಒಂದು ಘಳಿಗೆ ಹಾಯಾಗಿ ಕುಳಿತುಕೊಂಡರೆ ಎಷ್ಟು ಖುಷಿಯಾಗುತ್ತದೆ ಅಲ್ಲವೆ? ಅದರಲ್ಲಿಯೂ ಸ್ವಲ್ಪ ಹೊತ್ತು ಮಲಗಿದರೆ ಇನ್ನೂ ಖುಷಿ… ಯಾರಾದರೂ ಕೈ ಕಾಲುಗಳನ್ನು ಒತ್ತಿ ಮಸಾಜ್​ ಮಾಡಿದರೆ? ಸುಸ್ತೆಲ್ಲಾ ಹೊರಟುಹೋಗಿ ನೆಮ್ಮದಿ ಎನಿಸುತ್ತದೆ ಅಲ್ಲವೆ?

ಇವೆಲ್ಲದಕ್ಕೂ ಉತ್ತರವೇ ಮಸಾಜ್​. ಮಸಾಜ್​ ಮೂಲಕ ಮೈಕೈ ನೋವು ಮಾತ್ರವಲ್ಲದೇ ಹಲವಾರು ತೆರನಾದ ದೈಹಿಕ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯವಾಗಿದೆ. ಅಂಥದ್ದೇ ಒಂದು ಮಸಾಜ್​ ಬಗ್ಗೆ ಇಲ್ಲಿ ಹೇಳುತ್ತಿರುವುದು. ಹಾಗೆ ಸ್ವಲ್ಪ ಡಿಫರೆಂಟ್​ ಎನ್ನಿಸುವ ಮಸಾಜ್​ ಇದು. ಈ ಮಸಾಜ್​ ಮಾಡಿಕೊಂಡರೆ ಚಿರಯೌವನವೂ ಇರುತ್ತಂತೆ. ಮೈಕೈ ನೋವೂ ಕಡಿಮೆಯಾಗುತ್ತದೆಯಂತೆ.

ಇಂಥದ್ದೊಂದು ಮಸಾಜ್​ ಸೆಂಟರ್​ ಇರುವುದು ಈಜಿಪ್ಟಿನ ಕೈರೋದ ಸ್ಪಾ ಒಂದರಲ್ಲಿ. ಈ ಮಸಾಜ್​ ವಿಶೇಷ ಎಂದರೆ ಮೈಮೇಲೆ ಹಾವನ್ನು ಬಿಟ್ಟು ಇಲ್ಲಿ ಮಸಾಜ್​ ಮಾಡಲಾಗುತ್ತದೆ! ಬರೀ ಹಾವಲ್ಲ, ಹೆಬ್ಬಾವೂ ಇದರಲ್ಲಿ ಇರುತ್ತವೆ! ಕೇಳಿದರೆ ಮೈ ಝುಂ ಎನ್ನುತ್ತದೆಯಲ್ಲವೆ? ಆದರೆ ನಿಜವಾಗಿಯೂ ಇಲ್ಲಿ ಹಾವಿನ ಮೂಲಕ ಮಸಾಜ್​ ಮಾಡಲಾಗುತ್ತದೆ. ಮೈಮೇಲೆ, ಮುಖದ ಮೇಲೆ ಎಲ್ಲೆಡೆ ಹಾವುಗಳನ್ನು ಬಿಟ್ಟು ಸೌಂದರ್ಯವನ್ನೂ ವರ್ಧಿಸಲಾಗುತ್ತದೆ ಜತೆಗೆ ಶರೀರದ ನೋವುಗಳನ್ನೂ ನಿವಾರಣೆ ಮಾಡಲಾಗುತ್ತದೆ.

ಮೊದಲು ಗ್ರಾಹಕರ ಶರೀರದ ಮೇಲೆ ವಿಶೇಷವಾದ ತೈಲವನ್ನು ಉಜ್ಜಲಾಗುತ್ತದೆ. ನಂತರ ವಿಷಪೂರಿತ ಹೆಬ್ಬಾವುಗಳನ್ನು ಮೈಮೇಲೆ ಹರಿಸಲಾಗುತ್ತದೆ. ಸುಮಾರು 30 ನಿಮಿಷ ಮಸಾಜ್​ ಮಾಡುತ್ತವೆ ಈ ಹಾವು.

ಇದನ್ನು ಕಂಡು ಮೊದಮೊದಲು ಜನರು ಇಲ್ಲಿಗೆ ಬರಲು ಹೆದರುತ್ತಿದ್ದರಂತೆ. ಆದರೆ ಅನೇಕ ಮಂದಿಗೆ ಇದರಿಂದ ಪ್ರಯೋಜನ ಆಗಿರುವುದನ್ನು ಕಂಡು ಇದೀಗ ಈ ಸ್ಪಾಕ್ಕೆ ಬಾರಿ ಡಿಮಾಂಡ್​ ಬಂದಿದೆ. ಮೊದಲೇ ಬುಕ್ಕಿಂಗ್​ ನಡೆಯುತ್ತದೆ. ತಿಂಗಳುಗಟ್ಟಲೆ ಕಾದ ನಂತರ ಸರದಿ ಬರುವುದೂ ಇದೆ.

ಎಷ್ಟೆಂದರೂ ಸೌಂದರ್ಯದ ಮಾತಲ್ಲವೆ? ಇದು ನುರಿತರು ಮಾತ್ರ ಮಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಟ್ರೈ ಮಾಡಲು ಹೋಗಬೇಡಿ. ಜೀವಕ್ಕೆ ಅಪಾಯವಿದೆ ಎಂದೂ ಸ್ಪಾ ಮಾಲೀಕರು ಎಚ್ಚರಿಕೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *