Connect with us

    FILM

    15 ವರ್ಷದ ನಂತರ ಲತಿಕಾ ಮನೆಗೆ ಭೇಟಿ ನೀಡಿದ ಕಿಚ್ಚ ಸುದೀಪ್

    ಬೆಂಗಳೂರು, ಡಿಸೆಂಬರ್ 30: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುದೀಪ್​, ಅಭಿಮಾನಿಗಳಿಗೆ ಒಂದು ವಿಡಿಯೋ ಟ್ರೀಟ್​ ಕೊಟ್ಟಿದ್ದಾರೆ. ಅದು ಸಹ ತಮ್ಮ 15 ವರ್ಷಗಳ ಹಿಂದಿನ ನೆನಪನ್ನು ಹಸಿರಾಗಿಸುವ ವಿಡಿಯೋ ಇದಾಗಿದೆ.ಹೌದು, ಕಿಚ್ಚ ಸುದೀಪ್​ ಕೇರಳದಲ್ಲಿದ್ದಾರೆ. ಅಲ್ಲಿ ರಿಲ್ಯಾಕ್ಸ್​ ಮಾಡುತ್ತಿರುವ ಸುದೀಪ್, ಲತಿಕಾ ಮನೆಗೆ ಭೇಟಿ ನೀಡಿದ್ದಾರೆ. ಅಷ್ಟಕ್ಕೂ ಯಾರು ಈ ಲತಿಕಾ ಅಂತೀರಾ..? ಮೈ ಆಫಗ್ರಾಫ್​ ಸಿನಿಮಾದಲ್ಲಿ ಬರುವ ಒಂದು ಪಾತ್ರ ಅಷ್ಟೇ .

    ಮೈ ಆಟೋಗ್ರಾಫ್​ ಸಿನಿಮಾವನ್ನು ಕೇರಳದಲ್ಲೂ ಚಿತ್ರೀಕರಿಸಲಾಗಿದ್ದು, ಅದೇ ಮನೆಗೆ ಸುದೀಪ್​ ಮತ್ತೆ ಭೇಟಿ ನೀಡಿದ್ದಾರೆ. ಅದೂ ಸಹ 15 ವರ್ಷಗಳ ನಂತರ. ಈ ಮನೆಯಲ್ಲಿ ಮಾಡಿದ್ದ ಚಿತ್ರೀಕರಣದ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಈ ವಿಡಿಯೋ ಮಾಡಿದ್ದಾರೆ.

    ಲತಿಕಾ ಮನೆಯಂಗಳದಲ್ಲಿ ಓಡಾಡುತ್ತಾ ಅಲ್ಲಿ, ಚಿತ್ರೀಕರಿಸಲಾಗಿರುವ ಒಂದೊಂದು ದೃಶ್ಯಗಳ ಬಗ್ಗೆಯೂ ಸುದೀಪ್​ ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳೂ ಸಹ ಖುಷಿಯಾಗಿದ್ದಾರೆ.

    ತಮಿಳಿನಲ್ಲಿ ತೆರೆಕಂಡಿದ್ದ ಸಿನಿಮಾ 2006ರಲ್ಲಿ ಕನ್ನಡಕ್ಕೆ ರಿಮೇಕ್​ ಆಗಿತ್ತು. ಮೈ ಆಟೋಗ್ರಾಫ್​ ಸುದೀಪ್​ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರದ ನಿರ್ಮಾಣ ಸಹ ಸುದೀಪ್​ ಅವರದ್ದೇ ಆಗಿತ್ತು. ಇನ್ನು ಇದರಲ್ಲಿ ಮೀನಾ, ದೀಪು, ಶ್ರೀದೇವಿಕಾ, ರಶ್ಮಿ ಕುಲಕರ್ಣಿ ಹಾಗೂ ಮುಂತಾದವರು ನಟಿಸಿದ್ದು, ಸೂಪರ್ ಹಿಟ್ ಚಿತ್ರವಾಗಿ ಮೂಡಿಬಂದಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply