LATEST NEWS
ಲೈಕ್, ಕಾಮೆಂಟ್‌ಗಾಗಿ ಹೀಗಾ ಮಾಡೋದು…!
ನವದೆಹಲಿ, ಅಕ್ಟೋಬರ್ 25: ನೀವು ಇನ್‌ಸ್ಟಾಗ್ರಾಂ ಅನ್ನು ಬಳಸುವುದಾದರೆ ಒಂದು ಮುದ್ದಾದ ಯುವತಿ ಕೆಂಪು ಸೀರೆ ಉಟ್ಟುಕೊಂಡು, ಕೆಂಪು ಗುಲಾಬಿಗಳನ್ನು ಮಾರಾಟ ಮಾಡುವ ವೈರಲ್ ಫೋಟೋ, ವಿಡಿಯೋಗಳನ್ನು ಗಮನಿಸಿರಬಹುದು.
ಆದರೆ ಇದೀಗ ಅದೇ ಯುವತಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ರೀತಿ ಹೂವು ಮಾರಿದ್ದು ಹಣ ಸಂಪಾದನೆಗಲ್ಲ, ಬದಲಾಗಿ ಲೈಕ್-ಕಾಮೆಂಟ್ ಸಂಪಾದನೆಗಾಗಿ. ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಒಬ್ಬರು ಮೈ ತುಂಬ ಕಪ್ಪು ಬಣ್ಣದಲ್ಲಿ ಮೇಕಪ್ ಮಾಡಿಸಿಕೊಂಡು, ಕಡು ಬಡವಿಯಂತೆ ಬಟ್ಟೆ ತೊಟ್ಟು, ಹೂ ಮಾರುತ್ತಾರೆ. ಅದನ್ನು ವಿಡಿಯೋ ಮಾಡಲೆಂದೇ ಒಂದು ತಂಡ ಯಾರಿಗೂ ತಿಳಿಯದಂತೆ ಸುತ್ತುತ್ತದೆ. ಈ ರೀತಿ ಮೇಕಪ್ ಮಾಡಿಸಿಕೊಂಡ ವಿಡಿಯೋವನ್ನೂ ಆ ಇನ್‌ಫ್ಲೂಯೆನ್ಸರ್ ಹಂಚಿಕೊಂಡಿದ್ದಾರೆ.
ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಲಾರಂಭಿಸಿದ್ದು, ‘ಕಪ್ಪು ಬಣ್ಣ ಹಚ್ಚಿಕೊಂಡು ಬಡವರಾಗಬೇಕೆಂಬ ನಿಮ್ಮ ಬುದ್ಧಿ ಸರಿಯಿಲ್ಲ, ‘ಪ್ರಚಾರಕ್ಕಾಗಿ ಈ ರೀತಿ ಬಡವರ ಬದುಕನ್ನು ಬಳಸಿಕೊಳ್ಳಬಾರದು’ ಎಂದು ಪ್ರತಿಕ್ರಿಯಿಸಲಾರಂಭಿಸಿದ್ದಾರೆ.