Connect with us

    LATEST NEWS

    ಮಂಗಳೂರು ಪೊಲೀಸರಿಗೆ ತಲೆನೋವಾಗ್ತಿದೆ ಕ್ರಿಮಿನಲ್ಸ್ ಅರೆಸ್ಟ್….!!

    ಮಂಗಳೂರು ಜುಲೈ 18: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನ ಸ್ಪೋಟಗೊಳ್ಳುತ್ತಿರುವ ನಡುವೆ ಈಗ ಕೊರೊನಾ ವಾರಿಯರ್ಸ್ ಆದ ಪೊಲೀಸರಿಗೂ ತಲೆನೋವು ತಂದೊಡ್ಡಿದೆ. ನಗರದಲ್ಲಿ ನಡೆಯುವ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವುದು ಈಗ ತಲೆನೋವಾಗಿ ಪರಿಣಮಿಸಿದೆ.


    ಈಗಾಗಲೇ ಜಿಲ್ಲೆಯಲ್ಲಿ ನಡೆದ ಪ್ರಮುಖ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ ಆರೋಪಿಗಳಿಗೆಲ್ಲ ಕೊರೊನಾ ಪಾಸಿಟಿವ್ ಆಗಿದ್ದು, ಪೊಲೀಸರನ್ನು ಈಗ ಕ್ಪಾರಂಟೈನ್ ನಲ್ಲಿಡಲಾಗಿದೆ. ಅಡ್ಯಾರ್ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ ಪ್ರಕರಣ ಮೂವರು ಆರೋಪಿಗಳು ಹಾಗೂ ಬಜಿಲಕೇರಿಯಲ್ಲಿ ತಲವಾರ್‌ ದಾಳಿ ನಡೆಸಿದ ಪ್ರಕರಣದ ಎಂಟು ಮಂದಿ ಆರೋಪಿಗಳ ಪೈಕಿ 6 ಜನರಿಗೆ ಕೊರೊನಾ ಪಾಸಿಟಿವ್‌ ಆಗಿದ್ದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಬಂದರು ಪೊಲೀಸ್ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.


    ನಗರದ ಹೊರ ವಲಯದ ಅಡ್ಯಾರ್‌ನಲ್ಲಿ ಗ್ರಾಪಂ ಸದಸ್ಯ ಅಡ್ಯಾರ್ ಪದವು ನಿವಾಸಿ ಯಾಕೂಬ್ (46) ಎಂಬವರನ್ನು ನಾಲ್ವರು ಸೇರಿ ಹತ್ಯೆ ಮಾಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಗೆ ವಿಧಿಸಿ ನಿಯಮ ಪ್ರಕಾರವಾಗಿ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಶುಕ್ರವಾರ ಈ ಮೂವರು ಆರೋಪಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂವರಿಗೆ ಸೋಂಕು ದೃಢಪಟ್ಟ ಹಿನ್ನಲೆ ಆರೋಪಿಗಳನ್ನು ಬಂಧಿಸಿದ ಪೊಲೀಸ್‌ ಇನ್‌ಸ್ಟೆಕ್ಟರ್‌ ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.


    ಇನ್ನೊಂದು ಪ್ರಕರಣದಲ್ಲಿ ನಗರದ ಬಜಿಲಕೆರೆಯಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಒಂದು ತಂಡದ 8 ಮಂದಿ ಆರೋಪಿಗಳ ಪೈಕಿ ಆರು ಜನರಿಗೆ ಸೋಂಕು ಪಾಸಿಟಿವ್‌ ಆಗಿದೆ. ಬಜಿಲಕೆರೆಯಲ್ಲಿ ಎರಡು ತಂಡಗಳ ನಡುವೆ ಘರ್ಷನೆ ನಡೆದು ತಲವಾರ್‌ ದಾಳಿಯಾದ ಪ್ರಕರಣಕ್ಕೆ ಸಂಬಂಧಿಸಿ ಒಂದು ತಂಡದ 8 ಮಂದಿ ಮತ್ತು ಇನ್ನೊಂದು ತಂಡದ 4 ಮಂದಿಯನ್ನು ಬಂಧಿಸಲಾಗಿತ್ತು. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಗಳಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಆರು ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.


    ಈ ಎರಡು ಪ್ರಕರಣದ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಬಂದರು ಪೊಲೀಸ್ ಠಾಣೆಯಲ್ಲಿ ಇರಿಸಿದ ಕಾರಣದಿಂದಾಗಿ ಎರಡು ಠಾಣೆಗಳನ್ನು ಎರಡು ದಿನಗಳ ಕಾಲ ಸೀಲ್‌ಡೌನ್‌ ಮಾಡಿ ಸ್ಯಾನಿಟೈಝೇಷನ್‌ಗೆ ಸೂಚಿಸಲಾಗಿದೆ. ಹಾಗೆಯೇ ಪೊಲೀಸರ ಗಂಟಲ ದ್ರವದ ಮಾದರಿಯನ್ನು ಕೂಡಾ ಪರೀಕ್ಷೆಗೆ ರವಾನಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ನಾಗಾಲೋಟದಲ್ಲಿ ಹೆಚ್ಚಾಗುತ್ತಿದ್ದು, ಈ ನಡುವೆ ಪೊಲೀಸರಿಗೆ ಆರೋಪಿಗಳ ಬಂಧನದಿಂದಾಗಿ ಕೊರೊನಾ ಸೊಂಕು ತಗುಲಿಸಿಕೊಳ್ಳುವ ಸಂಕಷ್ಟ ಎದುರಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *