LATEST NEWS
ಕೊನೆಗೂ ಸಾಮಾಜಿಕ ಜಾಲತಾಣಕ್ಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಎಂಟ್ರಿ

ಕೊನೆಗೂ ಸಾಮಾಜಿಕ ಜಾಲತಾಣಕ್ಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಎಂಟ್ರಿ
ಮಂಗಳೂರು ಅಗಸ್ಟ್ 9: ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಕೊನೆಗೂ ಸಾಮಾಜಿಕ ಜಾಲತಾಣಗಳಿಗೆ ಪ್ರವೇಶಿಸಿದೆ. ಇಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಅಧಿಕೃತವಾಗಿ ತಮ್ಮ ಟ್ವೀಟರ್ ಅಕೌಂಟ್ ಗೆ ಚಾಲನೆ ನೀಡಿದೆ.
ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಜಿಲ್ಲೆಯಾಗಿ, ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ಜಿಲ್ಲೆಯ ಜನ ಮುಂದುವರೆದಿದ್ದರೂ ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮಾತ್ರ ಇಲ್ಲಿಯವರೆಗೆ ಯುವಜನತೆಯ ಹತ್ತಿರ ಕೊಂಡೊಯ್ಯುವ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಹಿಂದೆ ಬಿದ್ದಿತ್ತು, ರಾಜ್ಯದ ಬಹುತೇಕ ಜಿಲ್ಲಾಧಿಕಾರಿ ಕಚೇರಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ವರ್ಷಗಳೇ ಕಳೆದಿದ್ದು, ಸಕ್ರಿಯವಾಗಿ ಮಾಹಿತಿಯನ್ನು ನೀಡುತ್ತಿದ್ದವು.

ಇಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಅಧಿಕೃತವಾಗಿ ಟ್ವೀಟರ್ ಅಕೌಂಟ್ ತೆರೆಯುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿಕೊಟ್ಟಿದೆ. @DCDK9 ಇಂದು ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧಿಕೃತ ಟ್ವೀಟರ್ ಅಕೌಂಟ್ ಆಗಿದ್ದು, ಜಿಲ್ಲೆಯ ಬಗ್ಗೆ ಮಾಹಿತಿಗಳು ಇದರಲ್ಲಿ ಇನ್ನುಮುಂದೆ ದೊರೆಯಲಿದೆ.
ಇಂದು ಪ್ರಾರಂಭವಾಗಿರುವ ಈ ಟ್ವೀಟರ್ ನಲ್ಲಿ ಈಗಾಗಲೇ ಜಿಲ್ಲಾಡಳಿತ ನೇತ್ರಾವತಿ ನದಿ ತೀರದ ಬಗ್ಗೆ ಪ್ರತಿಕಾ ಪ್ರಕಟಣೆ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಜಿಲ್ಲೆಯಿಂದ ಹಾದು ಹೋಗುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರವಾಹದ ಬಗ್ಗೆ ಮಾಹಿತಿಯನ್ನು ಕೂಡ ಹಾಕಿದ್ದಾರೆ. ಜಿಲ್ಲಾಡಳಿತದ ಟ್ವೀಟರ್ ಪ್ರವೇಶವನ್ನು ನೆಟ್ಟಿಗರು ಸ್ವಾಗತಿಸಿದ್ದು, ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.