ಉಳ್ಳಾಲ ಸೇತುವೆಯಿಂದ ಹಾರಿ ಯುವತಿಯೊಬ್ಬಳ ಆತ್ಮಹತ್ಯೆ

ಮಂಗಳೂರು ಅಗಸ್ಟ್ 9: ಇತ್ತೀಚೆಗೆ ಕಾಫಿ ಡೆ ಮಾಲಿಕ ಸಿದ್ದಾರ್ಥ ಆತ್ಮಹತ್ಯೆ ನಂತರ ದೇಶದಾದ್ಯಂತ ಗುರುತಿಸಲ್ಪಟ್ಟ ಉಳ್ಳಾಲ ಸೇತುವೆಯಿಂದ ಮತ್ತೊಂದು ಯುವತಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯುವತಿಯನ್ನು ಗಜನೀಶ್ವರೀ ಕೆ ಎಂದು ಗುರುತಿಸಲಾಗಿದೆ. ಯುವತಿ ಇಂದು ಸಂಜೆ 7 ಗಂಟೆ ಸಂದರ್ಭ ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಫಿ ಕಿಂಗ್ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಪಕ್ಕದಲ್ಲೇ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ಥಳಕ್ಕೆ ಕಂಕನಾಡಿ ಪೊಲೀಸರು ಆಗಮಿಸಿದ್ದು, ಯುವತಿಗಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ಯುವತಿಗೆ ಸೇರಿದ್ದ ಚೀಲ ಮತ್ತು ಮೊಬೈಲ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

Facebook Comments

comments