ಭಾರಿ ಮಳೆ ಹಿನ್ನಲೆ ಉಡುಪಿ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ (ಅಗಸ್ಟ್ 10) ರಜೆ

ಮಂಗಳೂರು ಅಗಸ್ಟ್ 9: ಕರಾವಳಿಯಲ್ಲಿ ಇನ್ನೂ ಬಿಡದೆ ಸುರಿಯುತ್ತಿರುವ ಮಳೆ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನಲೆ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು , ಜಿಲ್ಲೆಯ ಎಲ್ಲಾ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಅಲ್ಲದೆ ಜಿಲ್ಲೆಯ ಹಲವಾರು ಕಡೆ ತಗ್ಗು ಪ್ರದೇಶಗಳು ನೆರೆ ಭಾದಿತವಾಗಿದೆ. ಅಲ್ಲದೆ ನಾಳೆ ಕೂಡ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ , ಸ್ನಾತಕೋತ್ತರ ಪದವಿ ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಕಳೆದೆರಡು ದಿನಗಳಿಂದ ನೀಡಿರುವ ರಜೆಯನ್ನು ನಾಳೆ ದಿನಾಂಕ 10.08.2019 ರಂದು ಕೂಡಾ ವಿಸ್ತರಿಸಿ ರಜೆ ಘೋಷಿಸಿದ್ದಾರೆ.

ಉಡುಪಿಯಲ್ಲೂ ರೆಡ್ ಅಲರ್ಟ್ ಜಾರಿಯಲ್ಲಿರುವ ಹಿನ್ನಲೆ ಅಲ್ಲದೆ ಭಾರಿ ಮಳೆ ಸುರಿಯುತ್ತಿರುವ ಕಾರಣ ನಾಳೆ ದಿನಾಂಕ 10.08.2019 ರಂದು ಕೂಡಾ ವಿಸ್ತರಿಸಿ ರಜೆ ಘೋಷಿಸಿ ಜಿಲ್ಲಾಧಿಕಾರಿ ಹೆಪ್ಸಿಭಾ ರಾಣಿ ಕೊರ್ಲಾಪಾಟಿ ಆದೇಶಿಸಿದ್ದಾರೆ.

Facebook Comments

comments