Connect with us

    LATEST NEWS

    ಕಟೀಲು ಮೇಳ ಯಕ್ಷಗಾನ ಕಾಲಮಿತಿಯಲ್ಲಿ ಮುಂದುವರಿದ ಗೊಂದಲ – ಕೋರ್ಟ್ ಗಳ ಆದೇಶ ಪಾಲಿಸಿ ಎಂದ ಡಿಸಿ

    ಮಂಗಳೂರು ಜನವರಿ 12: ಪ್ರದರ್ಶನಕ್ಕೆ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳಗಳು ಸಿದ್ಧತೆ ನಡೆಸುತ್ತಿರುವಂತೆಯೇ ಯಕ್ಷಗಾನ ಪ್ರದರ್ಶನ ವೇಳೆ ಶಬ್ದಮಾಲಿನ್ಯ ನಿಯಮಾವಳಿ, ರಾಜ್ಯ ಹೈಕೋರ್ಟ್ ಆದೇಶದ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ ಪ್ರಸಾದಿತ ಆರೂ ದಶಾವತಾರ ಯಕ್ಷಗಾನ ಮಂಡಳಿಗಳ ಬಯಲಾಟ ಪ್ರದರ್ಶನ ವ್ಯವಸ್ಥೆಯಲ್ಲಿ ದೇಗುಲದ ಆಡಳಿತ ಮಂಡಳಿ ನೀಡಿದ ಪರಿಷ್ಕೃತ ಪ್ರಕಟಣೆ ಸಾರ್ವಜನಿಕ ವಲಯದಲ್ಲಿ ಗೊಂದಲ ಎಬ್ಬಿಸಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.


    ಈ ಎಲ್ಲ ನಿಯಮಗಳನ್ನು ಪಾಲಿಸುವುದು ಹಾಗೂ ಪಾಲಿಸುವಂತೆ ನೋಡಿಕೊಳ್ಳುವುದು ದೇವಸ್ಥಾನ ಮಂಡಳಿಯ ಜವಾಬ್ದಾರಿಯಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ 15-11-20225 ಆದೇಶದಲ್ಲಿ ಯಕ್ಷಗಾನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ರಾತ್ರಿ 10 ಗಂಟೆಯಿಂದ ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಆದೇಶವನ್ನು ಪ್ರಶ್ನಿಸಿ ಕೃಷ್ಣಕುಮಾ‌ರ್ ಎಂಬವರು ಹೈಕೋರ್ಟ್ ಮೊರೆ ಹೋಗಿದ್ದರು. ಆ ಕುರಿತ ಹೈಕೋರ್ಟ್‌ 28-11-2023ರ ಆದೇಶದಲ್ಲಿ ಯಕ್ಷಗಾನ ಮೇಳದ ಪ್ರದರ್ಶನ ಅವಧಿ ಬಗ್ಗೆ ಅರ್ಜಿದಾರರು ಸೂಕ್ತ ಪ್ರಸ್ತಾವನೆ ಕಳುಹಿಸಿ ಜಿಲ್ಲಾಧಿಕಾರಿಯಿಂದ ಅಗತ್ಯ ಕ್ರಮ ವಹಿಸಬೇಕು ಎಂದು ಆದೇಶಿಸಿದ್ದರೂ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಅಲ್ಲದೆ ಕೋವಿಡ್ 19ರ ನಿರ್ದಿಷ್ಟ ನಿಬಂಧನೆ ಅಥವಾ ಕೋವಿಡ್ 19ರ ಪೂರ್ವ ಪದ್ಧತಿ ಯಾವುದು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.


    ಜನವರಿ 14ರಿಂದ ಕಾಲಮಿತಿ ಕೈ ಬಿಟ್ಟು ಇಡೀ ರಾತ್ರಿ ಯಕ್ಷಗಾನ ಬಯಲಾಟ ಪ್ರದರ್ಶನ ನೀಡಲಾಗುವುದು ಎಂದು ಕಟೀಲು ದೇವಸ್ಥಾನದ ಆಡಳಿತ ಮಂಡಳಿ ಹೇಳಿಕೆ ನೀಡಿತ್ತು. ಇದು ಕಾಲಮಿತಿಗೆ ಹೊಂದಿಕೊಂಡ ಸೇವಾಕರ್ತರಿಗೆ ಹಾಗೂ ಕೆಲವು ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿತ್ತು. ಏಕಾಏಕಿ ಕಾಲಮಿತಿಯನ್ನು ಬದಲಾಯಿಸಿ ಇಡೀ ರಾತ್ರಿಗೆ ಯಕ್ಷಗಾನ ಪ್ರದರ್ಶನ ವಿಸ್ತರಿಸಿದ್ದನ್ನು ಕೆಲವು ಸೇವಾಕರ್ತರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಕಟೀಲು ಮಂದಿ ಸೇವಾಕರ್ತರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಅಲ್ಲದೆ ದೇವಸ್ಥಾನದಿಂದಲೂ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ನಿರ್ಧರಿಸಿರುವುದನ್ನು ಜಿಲ್ಲಾಡಳಿತಕ್ಕೆ ಗಮನಕ್ಕೆ ತರಲಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಸುಪ್ರೀಂ ಕೋರ್ಟ್ ನಿಯಮ ಹಾಗೂ ಹೈಕೋರ್ಟ್ ಸೂಚನೆಯನ್ನು ಕಟ್ಟುನಿಟ್ಟು ಪಾಲಿಸುವಂತೆ ನಿರ್ದೇಶನ ನೀಡಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶದನ್ವಯ ರಾತ್ರಿ 10 ಗಂಟೆ ಬಳಿಕ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ. ಆದರೆ ಈ ಹಿಂದೆ ಜಿಲ್ಲಾಧಿಕಾರಿಗಳ 15.11.2022ರ ಆದೇಶದಲ್ಲಿ ಕಟೀಲು ಮೇಳದ ಹರಕೆಯ ಯಕ್ಷಗಾನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಭಕ್ತಾಭಿಮಾನಿಗಳ ಭಾವನೆಗಳಿಗೆ ಕುಂದುಂಟಾಗದಂತೆ ರಾತ್ರಿ 10 ಗಂಟೆಯಿಂದ ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಕೆಲವು ವರ್ಷದ ಮೊದಲು ಇದ್ದಂತೆಯೇ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಹೈಕೋರ್ಟ್‌ಗೆ ಕೃಷ್ಣ ಕುಮಾರ್ ಎಂಬವರು ಅರ್ಜಿ ಹಾಕಿದ್ದರು.

    ಕೊರೋನಾ ಪೂರ್ವದಲ್ಲಿ ಇದ್ದಂತೆಯೇ ರಾತ್ರಿ 9 ರಿಂದ ತೊಡಗಿ ಬೆಳಗ್ಗಿನವರೆಗೂ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶಕೊಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಬಗ್ಗೆ ಹೈಕೋರ್ಟ್ ಕೂಡ ಅರ್ಜಿದಾರರಿಗೆ, ಕೊರೊನಾಕ್ಕೆ ಮೊದಲಿನಂತೆಯೇ ಯಕ್ಷಗಾನ ಪ್ರದರ್ಶಿಸಬಹುದು. ಆದರೆ ಶಬ್ದ ಮಾಲಿನ್ಯ ನಿಯಮಾವಳಿ-2000 ಅನ್ನು ಉಲ್ಲಂಘಿಸಿದಂತೆ ಗಮನಹರಿಸಬೇಕು ಎಂಬ ಷರತ್ತು ವಿಧಿಸಿತ್ತು. ಅರ್ಜಿ ವಾರರು ಸೂಕ್ತ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು, ಜಿಲ್ಲಾಧಿಕಾರಿ ಈ ಆದೇಶದಲ್ಲಿರುವ ಗಮನದಲ್ಲಿರಿಸಿಕೊಂಡು ಅಂಶಗಳನ್ನು ಕೈಗೊಳ್ಳಬಹುದು ಎಂದೂ ಆದೇಶಿಸಿತ್ತು. ಈ ಹಿಂದಿನಂತೆ ಇಡೀ ರಾತ್ರಿ ಯಕ್ಷಗಾನ ನಡೆಸುವುದಕ್ಕೆ ತೊಂದರೆ ಏನೂ ಇಲ್ಲ. ಆದರೆ ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 10 ರ ನಂತರ ಶಬ್ದಮಾಲಿನ್ಯ ಇರಬಾರದು. ಶಬ್ದ ಮಾಲಿನ್ಯವೆಂದರೆ ಅದನ್ನು ಡೆಸಿಬೆಲ್ ಲೆಕ್ಕದಲ್ಲಿ ಅಳೆಯುವಂಥದ್ದು. ಸಾಮಾನ್ಯವಾಗಿ 50 ಡೆಸಿಬೆಲ್ ಮೀರಬಾರದು ಎಂಬ ನಿಯಮವಿದೆ. ಆದರೆ ಧ್ವನಿವರ್ಧಕ 400 ಡೆಸಿಬೆಲ್ ಮೀರುತ್ತದೆ. ಮಾತನಾಡುವ ಧ್ವನಿಯೇ 50 ಡೆಸಿಬಲ್ ಇರುತ್ತದೆ. ಚೆಂಡೆಯ ಪೆಟ್ಟು 200 ಡಿಬಿ ಇರುತ್ತದೆ. ಹಾಗಿರುವಾಗ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನ ಎಷ್ಟರ ಮಟ್ಟಿಗೆ ಸಾಧ್ಯವೇ ಎಂಬ ಜಿಜ್ಞಾಸೆಯಿದೆ. ಯಕ್ಷಗಾನ ತಡರಾತ್ರಿ ಪ್ರದರ್ಶನದ ವೇಳೆ ಧ್ವನಿ ವರ್ಧಕವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವಂತೆ ತಿಳಿಸಲಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದರೂ, ವಾಸ್ತವವಾಗಿ ಇದು ಎಷ್ಟರ ಮಟ್ಟಿಗೆ ಕಾರ್ಯಸಾಧ್ಯ ಎಂದು ಕಾದು ನೋಡಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply