Connect with us

    LATEST NEWS

    ದಕ್ಷಿಣಕನ್ನಡದಲ್ಲಿ ಕೊರೊನಾ ಅಟ್ಟಹಾಸಕ್ಕೆ ಮತ್ತೆ ಆರು ಬಲಿ

    ಮಂಗಳೂರು ಜುಲೈ 10:ದಕ್ಷಿಣಕನ್ನಡದಲ್ಲಿ ಇಂದು ಕೊರೊನಾ ಮರಣಮೃದಂಗ ಬಾರಿಸಿದ್ದು, ಒಂದೇ ದಿನ 6 ಜನ ಕೊರೊನಾಗೆ ಬಲಿಯಾಗಿದ್ದು, ಇಡೀ ಜಿಲ್ಲೆಯನ್ನು ಬೆಚ್ಚಿ ಬಿಳಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
    ಇಂದು ಮೃತಪಟ್ಟವರಲ್ಲಿ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ನಾಲ್ವರು ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.


    ಮಂಗಳೂರಿನ ಕೊವಿಡ್ ಆಸ್ಪತ್ರೆಯಲ್ಲಿ ಉಳ್ಳಾಲದ 67 ವರ್ಷದ ವೃದ್ಧ ವ್ಯಕ್ತಿ, ತೊಕ್ಕೊಟ್ಟಿನ 58 ವರ್ಷದ ಮಹಿಳೆ, ಮಂಗಳೂರಿನ ಫಳ್ನೀರ್ ನಿವಾಸಿ 65 ವರ್ಷದ ವ್ಯಕ್ತಿ ಹಾಗೂ ಸುರತ್ಕಲ್ ಬಳಿಯ ಹೊಸಬೆಟ್ಟು 35 ವರ್ಷದ ಯುವಕ ಕೊರೊನಾದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮತ್ತೆ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಮೃತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *