Connect with us

    KARNATAKA

    ಡೈವೋರ್ಸ್ ವಿಚಾರಣೆ ವೇಳೆ ಪತಿಯಿಂದ ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಪತ್ನಿ – ಜಡ್ಜ್ ಶಾಕ್

    ಬೆಂಗಳೂರು ಅಗಸ್ಟ್ 22: ದಂಪತಿಯ ಡೈವೋರ್ಸ್ ವಿಚಾರಣೆ ವೇಳೆ ಮಾಸಿಕ ಜೀವನಾಂಶವಾಗಿ ಪತ್ನಿಯೊಬ್ಬಳು ಪತಿಯಿಂದ ಬರೋಬ್ಬರಿ 6,16,300 ರೂಪಾಯಿ ಕೇಳಿದ ಘಟನೆ ನಡೆದಿದ್ದು, ಈ ಬೇಡಿಕೆ ಕೇಳಿ ಜಡ್ಜ್ ಕೂಡ ಶಾಕ್ ಆಗಿ, ಆಕೆಯೆ ಇಷ್ಟು ಹಣ ದುಡಿದು ಸಂಪಾದಿಸಲಿ ಎಂದು ಹೇಳಿದ್ದಾರೆ. ಸದ್ಯ ಕೋರ್ಟ್ ನ ಈ ವಿಡಿಯೋ ವೈರಲ್ ಆಗಿದೆ.


    ಪತಿ ಹಾಗೂ ಪತ್ನಿ ನಡುವೆ ವಿಚ್ಚೇದನ ಅರ್ಜಿ ಏಕಸದಸ್ಯ ಪೀಠ ನ್ಯಾಯಮೂರ್ತಿ ಲಲಿತಾ ಕೆನ್ನೆಗಂಟಿ ಬಳಿ ಬಂದಿದೆ. ಅರ್ಜಿ ವಿಚಾರಣೆ ವೇಳೆ ಮಹಿಳೆಯ ಪರ ವಕೀಲರು ವಾದ ಮಂಡಿಸಿದ್ದಾರೆ. ಇದೇ ವೇಳೆ ಮಹಿಳೆಯ ಪ್ರತಿ ತಿಂಗಳ ಖರ್ಚಿನ ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ. ಪ್ರತಿ ತಿಂಗಳ ಬಟ್ಟೆ, ಚಪ್ಪಲಿ, ಶೂ, ಶೃಂಗಾರ ವಸ್ತುಗಳು ಸೇರಿದಂತೆ 15,000 ರೂಪಾಯಿ, ತಿಂಡಿ, ಊಟ ಸೇರಿದಂತ ಇತರ ಆಹಾರಗಳಿಗೆ ತಿಂಗಳು 60,000 ರೂಪಾಯಿಯ ಅವಶ್ಯಕತೆ ಇದೆ. ಮೊಣಕಾಲು ನೋವು, ಫಿಸಿಯೋಥೆರಪಿ, ಇತರ ಆರೋಗ್ಯ ಕಾಳಜಿ, ವೈದ್ಯಕೀಯ ತಪಾಸಣೆ ಹಾಗೂ ಔಷಧಿ ವೆಚ್ಚಕ್ಕಾಗಿ 4 ರಿಂದ 6 ಲಕ್ಷ ರೂಪಾಯಿ ಅಗತ್ಯವಿದೆ. ಹೀಗಾಗಿ ಒಟ್ಟು 6,16,300 ರೂಪಾಯಿ ಪ್ರತಿ ತಿಂಗಳ ಜೀವನಾಂಶವಾಗಿ ನೀಡಬೇಕು ಎಂದು ಮಹಿಳೆ ಪರ ವಕೀಲರು ವಾದ ಮಂಡಿಸಿದ್ದಾರೆ.

    ವಕೀಲರ ವಾದ ಕೇಳಿದ ನ್ಯಾಯಮೂರ್ತಿ ಲಲಿತಾ ಕೆನ್ನೆಗಂಟಿ ಗರಂ ಆಗಿದ್ದಾರೆ. ಮಾಸಿಕ ಜೀವನಾಂಶ ಮೊತ್ತ 6 ಲಕ್ಷ ರೂಪಾಯಿ? ಇಷ್ಟು ಮೊತ್ತ ತಿಂಗಳಿಗೆ ಯಾರಾದರೂ ಖರ್ಚು ಮಾಡುತ್ತಾರಾ? ಇಷ್ಟು ಮೊತ್ತದ ಅನಿವಾರ್ಯತೆ ಇದೆಯಾ? ನಿಮಗೆ ಇಷ್ಟು ದುಡ್ಡ ಜೀವನಾಂಶವಾಗಿ ಬೇಕೆಂದರೆ ದುಡಿದು ಸಂಪಾದಿಸಿ ಎಂದು ಜಡ್ಜ್ ಖಡಕ್ ಸೂಚನೆ ನೀಡಿದ್ದಾರೆ.

    ಜೀವನಾಂಶ ಪ್ರಮುಖ ವಿಚಾರ ಹೌದು, ಆದರೆ ಕೊಡುತ್ತಾರೆ ಎಂದು ಈ ರೀತಿ ಕೇಳುವುದೇ? ಮಕ್ಕಳ ನೋಡಿಕೊಳ್ಳಬೇಕಾದ ಜವಾಬ್ದಾರಿ ಮಹಿಳೆಗಿಲ್ಲ, ಸ್ವಂತ ಖರ್ಚಿಗೆ ಇಷ್ಟೊಂದು ದುಡ್ಡು ಕೇಳುತ್ತಿದ್ದೀರಾ? ನೀವು ಕೇಳವ ಮೊತ್ತಕ್ಕೆ ಅರ್ಥವಿರಬೇಕು, ಕಾರಣ ಸಮಂಜಸವಾಗಿರಬೇಕು. ನಿರ್ವಹಣೆಗೆ ಇಷ್ಟು ಮೊತ್ತ ಬೇಕು ಎಂದು ಹೇಳಬೇಡಿ. ಕಾನೂನು ಹಾಗೂ ನ್ಯಾಯಾಲಯದ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply