KARNATAKA
ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಉಡುಪಿಗೆ ಬಸವರಾಜ ಬೊಮ್ಮಾಯಿ

ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಉಡುಪಿಗೆ ಬಸವರಾಜ ಬೊಮ್ಮಾಯಿ
ಮಂಗಳೂರು ಸೆಪ್ಟೆಂಬರ್ 16: ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 2 ತಿಂಗಳುಗಳ ಬಳಿ ಸಿಎಂ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು, ಉಡುಪಿಗೆ ಉಸ್ತುವಾರಿ ಸಚಿವರನ್ನಾಗಿ ಬಸವರಾಜ್ ಬೊಮ್ಮಾಯಿಯನ್ನು ನೇಮಿಸಿದ್ದಾರೆ.
ಕಾಂಗ್ರೇಸ್ ಜೆಡಿಎಸ್ ಮೈತ್ರಿ ಸರಕಾರ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಲು 2 ತಿಂಗಳು ತೆಗೆದುಕೊಂಡಿದೆ. ಸಚಿವರ ನೇಮಕದಲ್ಲೂ ಅಚ್ಚರಿ ಮೂಡಿಸಿದ್ದ ಮುಖ್ಯಮಂತ್ರಿ ಬಿಎಸ್ ವೈ ಈ ಬಾರಿ ಉಸ್ತುವಾರಿ ಸಚಿವರ ನೇಮಕದಲ್ಲೂ ಮತ್ತೆ ಅಚ್ಚರಿ ಮೂಡಿಸಿದ್ದಾರೆ.

ಉಡುಪಿ ಜಿಲ್ಲೆಯವರಾದ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ದಕ್ಷಿಣಕನ್ನಡ ಜಿಲ್ಲೆಯ ಉಸ್ತುವಾರಿಯನ್ನು ನೀಡಿದ್ದು, ಉಡುಪಿಗೆ ಕರಾವಳಿಯಂದ ಹೊರಗಿನವರಾದ ಬಸವರಾಜ್ ಬೊಮ್ಮಾಯಿಯವರನ್ನು ನೇಮಿಸಿದ್ದಾರೆ.
ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ, ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಜೆಸಿ ಮಾಧುಸ್ವಾಮಿ, ಚಂದ್ರಕಾಂತ ಗೌಡ ಪಾಟೀಲ್, ವಿ. ಸೋಮಣ್ಣ, ಪ್ರಭು ಚೌಹಾಣ್ ಅವರಿಗೆ ಎರಡು ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
ಬಿ.ಎಸ್. ಯಡಿಯೂರಪ್ಪ- ಬೆಂಗಳೂರು ನಗರ
ಗೋವಿಂದ ಕಾರಜೋಳ – ಬಾಗಲಕೋಟೆ, ಕಲಬುರಗಿ
ಅಶ್ವಥ್ ನಾರಾಯಣ – ರಾಮನಗರ, ಚಿಕ್ಕಬಳ್ಳಾಪುರ
ಲಕ್ಷ್ಮಣ್ ಸವದಿ – ಬಳ್ಳಾರಿ, ಕೊಪ್ಪಳ
ಈಶ್ವರಪ್ಪ – ಶಿವಮೊಗ್ಗ, ದಾವಣಗೆರೆ
ಆರ್ ಅಶೋಕ್ – ಬೆಂಗಳೂರು ಗ್ರಾಮಾಂತರ, ಮಂಡ್ಯ
ಜಗದೀಶ್ ಶೆಟ್ಟರ್ – ಹುಬ್ಬಳ್ಳಿ -ಧಾರವಾಡ, ಬೆಳಗಾವಿ
ಶ್ರೀರಾಮುಲು – ರಾಯಚೂರು, ಚಿತ್ರದುರ್ಗ
ಸುರೇಶ್ ಕುಮಾರ್ – ಚಾಮರಾಜನಗರ
ವಿ ಸೋಮಣ್ಣ – ಮೈಸೂರು, ಕೊಡಗು
ಸಿಟಿ ರವಿ – ಚಿಕ್ಕಮಗಳೂರು
ಬಸವರಾಜ ಬೊಮ್ಮಾಯಿ – ಉಡುಪಿ, ಹಾವೇರಿ
ಕೋಟಾ ಶ್ರೀನಿವಾಸ್ ಪೂಜಾರಿ – ದಕ್ಷಿಣಕನ್ನಡ
ಜೆಸಿ ಮಾಧುಸ್ವಾಮಿ – ತುಮಕೂರು, ಹಾಸನ
ಚಂದ್ರಕಾಂತ ಗೌಡ ಪಾಟೀಲ್ – ಗದಗ, ವಿಜಯಪುರ
ಎಚ್ ನಾಗೇಶ್ – ಕೋಲಾರ
ಪ್ರಭು ಚೌಹಾಣ್ – ಬೀದರ್, ಯಾದಗಿರಿ
ಶಶಿಕಲಾ ಜೊಲ್ಲೆ- ಉತ್ತರ ಕನ್ನಡ