Connect with us

    BANTWAL

    ಹಿಂದೂ ವಿಧ್ಯಾರ್ಥಿಗಳಿಗೆ ಇಸ್ಲಾಂ ಧರ್ಮದ ಬಗ್ಗೆ ಪ್ರವಚನ: ಮುಖ್ಯೋಪಾಧ್ಯಾಯ, ಸಂಘಟಕರ ವಿರುದ್ಧ ಪ್ರಕರಣ ದಾಖಲು

    ವಿಟ್ಲ, ಫೆಬ್ರವರಿ 19: ಹಿಂದೂ ವಿಧ್ಯಾರ್ಥಿಗಳಿಗೆ ಇಸ್ಲಾಂ ಧರ್ಮದ ಬಗ್ಗೆ ಪ್ರವಚನ ನೀಡಿದ್ದಾರೆಂದು ಆರೋಪ ಎದುರಾಗಿದ್ದು ಶಾಲಾ ಮುಖ್ಯೋಪಾಧ್ಯಾಯ ಸೇರಿದಂತೆ ಸಂಘಟಕರ ವಿರುದ್ಧ ಪ್ರಕರಣ ದಾಖಲಾಗಿದೆ.

    ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಧಾರ್ಮಿಕ ಸಂಘಟಣೆಯೊಂದರ ರಾಜಕಮಲ್‌ ಎಂಬ ಖಾಸಗಿ ಹಾಲ್‌ಗೆ ಜನತಾ ವಿದ್ಯಾ ಸಂಸ್ಥೆಯ ಮುಖ್ಯೋಪಾದ್ಯಯರಾದ ಟಿ ಆರ್ ನಾಯಕ್‌ , ರಫೀಕ್‌ ಮಾಸ್ಟರ್ ಆತೂರ್ ಹಾಗೂ ನುಸ್ರುತುಲ್‌ ಇಸ್ಲಾಂ ಯಂಗ್‌ ಮೆನ್ಸ್ ಅಸೋಸಿಯಷನ್‌ ಸಂಘಟನಾಕಾರರು ಶಾಲೆಯ ವಿಧ್ಯಾರ್ಥಿಗಳನ್ನು ಶೈಕ್ಷಣಿಕ ಕಾರ್ಯಾಗಾರದ ನೆಪದಲ್ಲಿ ಕರೆಸಿಕೊಂಡು, ಕಾರ್ಯಾಗಾರದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ವಿಧ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದು ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ ಎನ್ನಲಾಗಿದೆ.

    ವಿದ್ಯಾರ್ಥಿಗಳು ಈ ವಿಚಾರವನ್ನು ಪೋಷಕರ ಗಮನಕ್ಕೆ ತಂದಿದ್ದು, ಈ ಹಿನ್ನಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್.ನಾಯ್ಕ್ , ರಫೀಕ್ ಮಾಸ್ಟರ್ ಅತೂರು, ಮತ್ತು ನಸ್ರತುಲಗ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ವಿರುದ್ಧ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply