Connect with us

    FILM

    ಜೈಲು ಸೇರಿ 2 ತಿಂಗಳ ಬಳಿಕ ದರ್ಶನನ್ನ ಭೇಟಿಯಾದ ರಚಿತಾ ರಾಮ್,’ರಾಜನನ್ನ ರಾಜನ ತರ ನೋಡೋಕೆ ಇಷ್ಟಎಂದು ಭಾವುಕಳಾದ ಡಿಂಪಲ್ ಕ್ವೀನ್

    ಬೆಂಗಳೂರು : ದರ್ಶನ್  ಪರಪ್ಪನ ಅಗ್ರಹಾರ  ಜೈಲು ಸೇರಿ ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ನಟಿ ಡಿಂಪಲ್ ಕ್ವೀನ್  ರಚಿತಾ ರಾಮ್ (Rachita Ram)ದರ್ಶನ್ ಅವರನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ.

    ಈ ಸಂದರ್ಭ ಜೈಲಲ್ಲಿ ದರ್ಶನ್ ನೋಡಿ ರಚಿತಾ ರಾಮ್ ಭಾವುಕಳಾದಳು. ಬಳಿಕ ಮಾಧ್ಯಮಳೊಂದಿಗೆ ಮಾತನಾಡಿದ ಅವರು  ‘ರಾಜನನ್ನ ರಾಜನ ರೀತಿ ನೋಡೋಕೆ ನನಗಿಷ್ಟ, ಈ ರೀತಿಯಲ್ಲಿ ನೋಡೋಕೆ ಕಷ್ಟ ಆಗುತ್ತೆ ಎಂದು ಭಾವುಕಳಾದಳು. ನಾನು ಅವರ ಬ್ಯಾನರ್​ನಿಂದಲೇ ಇಂಟ್ರಡ್ಯೂಸ್ ಆಗಿದ್ದು. ಅವ್ರು ನನಗೆ ಅವಕಾಶ ಕೊಡಲು ನೋ ಅಂದಿದ್ರೆ ಈ ಬಿಂದಿಯಾ ರಚಿತಾ ರಾಮ್ ಆಗುತ್ತಿರಲಿಲ್ಲ. ಅವರನ್ನ ನೋಡಿದ ಕೂಡಲೇ ನಾವೆಲ್ಲಾ ಭಾವುಕರಾದ್ವಿ, ಅವರೇ ನಮಗೆ ಧೈರ್ಯ ಹೇಳಿದ್ರು, ಸಮಾಧಾನ ಮಾಡಿದ್ರು ಎಂದು ರಚಿತಾ ಹೇಳಿದರು.

    ಕಾನೂನಿನಲ್ಲಿ ನಮಗೆ ನಂಬಿಕೆ ಇದೆ. ಆದಷ್ಟು ಬೇಗ ಹೊರಗೆ ಬರ್ತೀನಿ ಅಂತ ದರ್ಶನ್ ಹೇಳಿದ್ದಾರೆ ಅಂತ ರಚಿತಾ ರಾಮ್ ಮಾಧ್ಯಮಗಳ ಎದುರು ಹೇಳಿದ್ರು. ಅದಕ್ಕೆ ನಾನು ನಿಮಗೋಸ್ಕರ ವೇಟ್ ಮಾಡ್ತಾ ಇದ್ದೀವಿ ಬೇಗ ಬನ್ನಿ ಎಂದೆ. ಅವರನ್ನು ನೋಡಿದ ಮೇಲೆ ನನಗೆ ನಿರಾಳವಾಯ್ತು, ಆರೋಗ್ಯ ವಿಚಾರಿಸಿದಾಗ ಐ ಆ್ಯಮ್ ಫೈನ್ ಅಂದ್ರು ,ಅವರ ಋಣ ನಮ್ಮ ಕುಟುಂಬದ ಮೇಲಿದೆ, ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ತೀನಿ ಎಂದು ರಚಿತಾ ರಾಮ್ ಭಾವುಕರಾದರು.

    Share Information
    Advertisement
    Click to comment

    You must be logged in to post a comment Login

    Leave a Reply