LATEST NEWS
ದಿಗಂತ್ ನಾಪತ್ತೆ ಪ್ರಕರಣದ ವೇಳೆ ದ್ವೇಷ ಭಾಷಣ ಮಾಡಿದ ಶಾಸಕರ ಮೇಲೆ ಕ್ರಮಕ್ಕೆ ಆಗ್ರಹ

ಮಂಗಳೂರು ಮಾರ್ಚ್ 12: ಫರಂಗಿಪೇಟೆಯಿಂದ ಪಿ.ಯು ವಿದ್ಯಾರ್ಥಿ ನಾಪತ್ತೆ ಪ್ರಕರಣದ ಸಂದರ್ಭ ಪ್ರತಿಭಟನೆ ವೇಳೆ ಕೋಮು ದ್ವೇಷ ಹರಡಲು ಯತ್ನಿಸಿದ ಶಾಸಕ ಡಾ.ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜಾ, ಬಜರಂಗದಳ ಕಾರ್ಯಕರ್ತ ಭರತ್ ಕುಂಬೈಲು ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಕೊಳ್ಳಬೇಕು ಎಂದು ಒತ್ತಾಯಿಸಿ ಈ ಸಂಘಟನೆಗಳ ಕಾರ್ಯಕರ್ತರು ಇಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
‘ಕೋಮು ಸೂಕ್ಷ್ಮ ಪ್ರದೇಶದಲ್ಲಿ ದ್ವೇಷ ಭಾಷಣ ಮಾಡಿರುವ ಶಾಸಕ ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜ ವಿರುದ್ದ ಇನ್ನೂ ಪ್ರಕರಣ ದಾಖಲಿಸಿಲ್ಲವೇಕೆ ಎಂದು ಗೃಹಸಚಿವ ಜಿ.ಪರಮೇಶ್ವರ ಉತ್ತರಿಸಬೇಕು. ಕೋಮು ದ್ವೇಷ ಹುಟ್ಟಿಸುವವರ ವಿರುದ್ಧ ಪ್ರಕರಣ ದಾಖಲಿಸುವ ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪಕ್ಷವು ನೀಡಿದ್ದ ಭರವಸೆ ಏನಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ಮಿಯಾಜ್, ‘ವಿದ್ಯಾರ್ಥಿ ನಾಪತ್ತೆಯಾದಾಗ ಜನಪ್ರತಿನಿಧಿಗಳು ಆತನ ಕುಟುಂಬಕ್ಕೆ ಧೈರ್ಯ ತುಂಬಬೇಕಾಗಿತ್ತು. ಫರಂಗಿಪೇಟೆ ಹಾಗೂ ಅಮ್ಮೆಮಾರ್ ಪ್ರದೇಶದ ಮುಸ್ಲಿಂ ಸಮುದಾಯವ ವಿರುದ್ಧ ಸಮಾಜವನ್ನು ಎತ್ತಿಕಟ್ಟಲು ಯತ್ನಿಸಿರುವ ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜ ಶಾಸಕರಾಗಲು ನಾಲಾಯಕ್ ಎಂದು ಸಾಬೀತು ಮಾಡಿದ್ದಾರೆ. ನೀವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅತ್ಯಾಚಾರ ನಡೆದರೆ, ಇಡೀ ಕ್ಷೇತ್ರವನ್ನೇ ಅತ್ಯಾಚಾರಿಗಳ ವಿರುದ್ಧ ಸಮಾಜವನ್ನು ಎತ್ತಿಕಟ್ಟಲು ಯತ್ನಿಸಿರುವ ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜ ಶಾಸಕರಾಗಲು ನಾಲಾಯಕ್ ಎಂದು ಸಾಬೀತು ಮಾಡಿದ್ದಾರೆ.