Connect with us

KARNATAKA

ದಿಗಂತ್ ಮನೆಗೆ ಹೋಗಲು ಒಪ್ಪುತಿಲ್ಲ ಎಂದು ಹೈಕೋರ್ಟ್ ಗೆ ವರದಿ ಸಲ್ಲಿಸಿದ ಪೊಲೀಸರು..ಹೈಕೋರ್ಟ್ ಹೇಳಿದ್ದೇನು

ಮಂಗಳೂರು, ಮಾರ್ಚ್​ 12: ದ್ವಿತೀಯ ಪಿಯುಸಿ ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಸುಖಾಂತ್ಯ ಅಂದುಕೊಳ್ಳುತ್ತಿರುವಾಗಲೇ ಇದೀಗ ಮತ್ತೊಂದು ತಲೆ ನೋವು ಪ್ರಾರಂಭವಾಗಿದೆ. ದಿಗಂತ್ ನಾಪತ್ತೆಯಾದ ವೇಳೆ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಹೆಬಿಯಸ್ ಕಾರ್ಪಸ್ ಹಿನ್ನಲೆ ಇಂದು ದಿಂಗತ್ ಪತ್ತೆಯಾದ ಬಗ್ಗೆ ಹೈಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಪೊಲೀಸರು ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಫಿಡವಿಟ್ ನಲ್ಲಿ ದಿಗಂತ್ ಮನೆಗೆ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಬಂಟ್ವಾಳದ ಫರಂಗಿಪೇಟೆ ನಿವಾಸಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದೆ. ವಿಚಾರಣೆ ವೇಳೆ, ಪೊಲೀಸರ ಪರ ವಕೀಲರು “ದಿಗಂತ್​ ಪೋಷಕರ ಬಳಿ ಹೋಗಲು ನಿರಾಕರಿಸುತ್ತಿರುವ ಬಗ್ಗೆ ಹೈಕೋರ್ಟ್ ಗೆ ತಿಳಿಸಿದರು. ಇದೇ ವೇಳೆ ಮಗನನ್ನು ಕಳುಹಿಸಿ ಕೊಡುವಂತೆ ದಿಗಂತ್ ಫೋಷಕರು ಹೈಕೋರ್ಟ್​ಗೆ ಮನವಿ ಮಾಡಿಕೊಂಡರು. ದಿಗಂತ್ ಪೋಷಕರ ಪರ ವಕೀಲರು “ದಿಗಂತ್ ಪತ್ತೆಯಾದ ದಿನ ತಾಯಿ ಜೊತೆ ಫೋನ್​ನಲ್ಲಿ ಮಾತನಾಡಿದ ವಿವರ ನ್ಯಾಯಪೀಠಕ್ಕೆ ತಿಳಿಸಿದರು. ನಾನಾಗಿಯೇ ಹೋಗಿಲ್ಲ, ನನ್ನನ್ನು ಯಾರೋ ಕರೆದು ಕೊಂಡು ಹೋಗಿದ್ದಾರೆ ಅಂತ ದಿಗಂತ್​ ಎಂದಿದ್ದನ್ನು ಕೋರ್ಟ್ ಮುಂದೆ ಪ್ರಸ್ತಾಪಿಸಿದರು.

ಆದರೆ, ದಿಗಂತ್ ಅವನಾಗಿಯೇ ಹೋಗಿರುವುದಾಗಿ ಹೇಳಿದ್ದಾನೆ. ಅವನು ಯಾವುದೇ ಅನಧಿಕೃತ ಬಂಧನಕ್ಕೆ ಒಳಗಾಗಿರಲಿಲ್ಲ. ಪರೀಕ್ಷೆ ಭಯದಿಂದ ತಾನಾಗಿಯೇ ಹೋಗಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಗಿ ಪೊಲೀಸರ ವರದಿಯಲ್ಲಿದೆ. ಪಿಯುಸಿ ಪರೀಕ್ಷೆ ಇನ್ನೂ ಮುಗಿಯದ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೋಷಕರು ಇದೇ ವೇಳೆ ಮನವಿ ಮಾಡಿದರು. ಪರೀಕ್ಷೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಸೂಚನೆ ನೀಡಿತು. ಅಲ್ಲದೇ, ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗೆ ಯಾಕೆ ಒತ್ತಡ ಹೇರುತ್ತೀರಿ ಎಂದು ಪ್ರಶ್ನೆ ಮಾಡಿತು. ಈ ವೇಳೆ ದಿಂಗತ್ ಪೋಷಕರು ಮಗನ ಜೊತೆ ಮಾತನಾಡಲು ಅವಕಾಶ ಕೊಡುವಂತೆ ಹೈಕೋರ್ಟ್ ಮನವಿ ಮಾಡಿದರು. ಆದರೆ ಹೈಕೋರ್ಟ್​ ದಿಗಂತ್ ವಿಚಾರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿರ್ಧಾರ ಕೈಗೊಳ್ಳಬೇಕೆಂದು ಸೂಚನೆ ನೀಡಿತು. ದಿಗಂತ್ ಸದ್ಯ ಬೊಂದೆಲ್ ಮಕ್ಕಳ ಕಲ್ಯಾಣ ಸಮಿತಿ ವಶದಲ್ಲಿದ್ದಾರೆ.
ವಾದ-ಪ್ರತಿವಾದ ಆಲಿಸಿದ ಜಸ್ಟಿಸ್ ವಿ ಕಾಮೇಶ್ವರ್ ರಾವ್, ಜಸ್ಟಿಸ್ ಟಿ ಎಂ ನಡಾಫ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿದೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *