LATEST NEWS
ಗ್ಯಾಸ್ ಬಳಿಕ ಇದೀಗ ಪೆಟ್ರೋಲ್ ಡಿಸೇಲ್ ಬೆಲೆ ಕಡಿತ – ಮೋದಿ ಮ್ಯಾಜಿಕ್
ನವದೆಹಲಿ ಮಾರ್ಚ್ 14: ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವ ಹಿನ್ನಲೆ ಕೇಂದ್ರ ಸರಕಾರ ಗ್ಯಾಸ್ ಬಳಿಕ ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ 2 ರೂಪಾಯಿ ಕಡಿತಗೊಳಿಸಿದೆ.
ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳ ಮೂಲಕ ಪೂರೈಕೆಯಾಗುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಲೀಟರ್‌ಗೆ ₹2 ಕಡಿತ ಮಾಡಿರುವುದಾಗಿ ಕೇಂದ್ರ ಇಂಧನ ಸಚಿವಾಲಯ ತಿಳಿಸಿದ್ದು, ಇದು ಶುಕ್ರವಾರದಿಂದ ಜಾರಿಗೆ ಬರಲಿದೆ.
ಈ ಪರಿಷ್ಕೃತ ಬೆಲೆಯು ಶುಕ್ರವಾರ (ಮಾರ್ಚ್ 15) ಬೆಳಿಗ್ಗೆ 6ರಿಂದ ಜಾರಿಗೆ ಬರಲಿವೆ ಎಂದು ಸಚಿವಾಲಯ ಗುರುವಾರ ಸಂಜೆ ಹೇಳಿದೆ. ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ ₹94.72 ಹಾಗೂ ಡೀಸೆಲ್ ಬೆಲೆ ₹87.62ರಷ್ಟಾಗಲಿದೆ ಎಂದು ವರದಿಯಾಗಿದೆ.