National
ಶಾಕಿಂಗ್ ನ್ಯೂಸ್… ಈಗ ದೇಶದಲ್ಲಿ ಪೆಟ್ರೋಲ್ ಗಿಂತಲೂ ದುಬಾರಿಯಾದ ಡೀಸೆಲ್….!!

ಸತತ 18ನೇ ದಿನವೂ ಇಂಧನ ದರ ಏರಿಕೆ
ನವದೆಹಲಿ ಜೂನ್ 24: ಕೊರೊನಾ ಸಂಕಷ್ಟದ ನಡುವೆಯೂ ತೈಲ ದರಗಳು ಸತತವಾಗಿ ಏರಿಕೆ ಹಾದಿಯಲ್ಲೇ ಇದ್ದು ಕಳೆದ 17 ದಿನಗಳಿಂದ ಏರಿಕೆಯಾಗುತ್ತಲೇ ಇದೆ. ಆದರೆ 18ನೇ ದಿನವಾದ ಬುಧವಾರದ ದಿನದಂದು ಏರಿಕೆಯಾಗಿರುವ ಬೆಲೆ ಏರಿಕೆ ಡೀಸೆಲ್ ದರದಲ್ಲಿ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿದೆ.
ದೆಹಲಿಯಲ್ಲಿ ಬುಧವಾರ ಪೆಟ್ರೋಲ್ ಬೆಲೆಗಿಂತಲೂ ಡೀಸೆಲ್ ದರ ಹೆಚ್ಚಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಗಿಂತಲೂ ಡೀಸೆಲ್ ದರ ಹೆಚ್ಚಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಪೆಟ್ರೋಲ್ ದರ ರೂ. 79.76ರಷ್ಟಿದ್ದರೆ, ಡೀಸೆಲ್ ದರ ರೂ.79.88ಕ್ಕೆ ತಲುಪಿದೆ. ಅಂದರೆ ಪೆಟ್ರೋಲ್ ಗಿಂತಲೂ ಡೀಸೆಲ್ ದರ 12 ಪೈಸೆಯಷ್ಟು ಹೆಚ್ಚಾಗಿದೆ.
ದೆಹಲಿಯಲ್ಲಿಂದು ಪೆಟ್ರೋಲ್ ದರ ಏರಿಕೆ ಮಾಡಲಾಗಿಲ್ಲ. ಅದರೆ,ಡೀಸೆಲ್ ಬೆಲೆಯಲ್ಲಿ 48 ಪೈಸೆಯಷ್ಟು ಏರಿಕೆಯಾಗಿದೆ.