Connect with us

    National

    ಅರೆಬೆತ್ತಲೆ ದೇಹದ ಮೇಲೆ ಮಕ್ಕಳ ಕೈಯಿಂದ ಚಿತ್ರ ಬಿಡಿಸಿ ವಿಡಿಯೋ ಹರಿಬಿಟ್ಟ ಸಾಮಾಜಿಕ ಹೋರಾಟಗಾರ್ತಿ ರೆಹನಾ ಫಾತಿಮಾ

    ತಿರುವನಂತಪುರ, ಜೂ.24: ತನ್ನ ಸ್ವಂತ ಮಗ ಹಾಗೂ ಮಗಳನ್ನು ತನ್ನ ಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಲು ಬಳಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡ ಆರೋಪದಲ್ಲಿ ಮಹಿಳಾ ಸಮಾನತೆ ಹೋರಾಟಗಾರ್ತಿ ರೆಹನಾ ಫಾತಿಮಾ ವಿರುದ್ದ ಕೇರಳದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


    ಮಹಿಳಾ ಸಮಾನತೆ ವಿಚಾರದಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರೆಹನಾ ಫಾತಿಮಾ ತನ್ನ ಇಬ್ಬರು ಮಕ್ಕಳನ್ನು ಅರೆನಗ್ನ ದೇಹದ ಮೇಲೆ ಚಿತ್ರ ಬಿಡಿಸಲು ಬಳಸಿಕೊಂಡಿದ್ದಾರೆ. ತನ್ನ ಮಗ ಚಿತ್ರ ಬಿಡಿಸುತ್ತಿರುವುದನ್ನು ಸಂಪೂರ್ಣ ವಿಡಿಯೋ ಮಾಡಿ ಯುಟ್ಯೂಬ್ ಹಾಗೂ ಫೆಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ರೆಹನಾ ಫಾತಿಮಾ ವಿರುದ್ದ ಕಿಡಿಕಾರಿದ್ದಾರೆ. ತನ್ನದೇ ಮಕ್ಕಳನ್ನು ಈ ರೀತಿಯ ಲೈಂಗಿಕತೆಯ ವಿಡಿಯೋಗಳಿಗೆ ಬಳಸಿರುವುದರ ವಿರುದ್ದ ಕಿಡಿಕಾರಿದ್ದಾರೆ.

    ಈ ಹಿನ್ನಲೆ ಬಿಜೆಪಿ ಕಾರ್ಯಕರ್ತ ಅರುಣ್ ಪ್ರಕಾಶ್ ಎಂಬುವವರು ಮಂಗಳವಾರ ತಿರುವಳ್ಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ರೆಹಾನಾ ಅವರ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ತನ್ನ ದೇಹದ ಮೇಲೆ ಚಿತ್ರ ರಚಿಸಲು ಬಳಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ರೆಹಾನಾ ಫಾತಿಮಾ, ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು 2018ರಲ್ಲಿ ಸುಪ್ರೀಂ ಕೋರ್ಟ್ ತೆರವು ಮಾಡಿದ ಬಳಿಕ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಇವರ ಮೇಲೆ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ನಂತರ ಬಿಎಸ್‌ಎನ್‌ಎಲ್‌ ಕೆಲಸದಿಂದ ಅಮಾನತು ಮಾಡಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply