FILM
‘ಹೊಡೆದು ಪಾಠ ಕಲಿಸಬೇಕು ಎಂದುಕೊಂಡಿದ್ದರೇನೋ?’; ಕೊಲೆ ಕೇಸ್ನಲ್ಲಿ ದರ್ಶನ್ನ ಬೆಂಬಲಿಸಿ ಮಾತನಾಡಿದ ಪರಭಾಷಾ ನಟಿ
ಐ ಡ್ರೀಮ್ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಕಸ್ತೂರಿ ಮಾತನಾಡಿದ್ದಾರೆ. ‘ಆತ (ರೇಣುಕಾ ಸ್ವಾಮಿ) ನಟಿಗೆ ಕಿರುಕುಳ ನೀಡುತ್ತಿದ್ದ. ಆತನಿಗೆ ಇದರ ಅಗತ್ಯ ಏನಿತ್ತು? ದರ್ಶನ್ ಮಾಡಿದ್ದು ತಪ್ಪೇ. ಆದರೆ, ಈ ರೀತಿ ಆದಾಗ ಇದನ್ನು ಹ್ಯಾಂಡಲ್ ಮಾಡಬೇಕು? ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಅಶ್ಲೀಲ ಕಮೆಂಟ್ ಹಾಕುತ್ತಿದ್ದಾರೆ. ಹೀಗಿರುವಾಗ ಮೆಸೇಜ್ ಮಾಡೋದೇಕೆ? ದರ್ಶನ್ ವೈಯಕ್ತಿಕ ಬದುಕಲ್ಲಿ ಏನಾದರೂ ತೊಂದರೆ ಇದ್ದರೆ ಅದನ್ನು ನೋಡಿಕೊಳ್ಳೋಕೆ ಮೊದಲ ಪತ್ನಿ ಇದ್ದಾರೆ. ಇದು ಅವರ ವೈಕ್ತಿಕ ವಿಚಾರ’ ಎಂದಿದ್ದಾರೆ ಕಸ್ತೂರಿ. ದರ್ಶನ್ ಹಾಗೂ ವಿಜಯಲಕ್ಷ್ಮಿ ಮಧ್ಯೆ ಪವಿತ್ರಾ ಬಂದರು ಎನ್ನುವ ಕೋಪ ರೇಣುಕಾಸ್ವಾಮಿಗೆ ಇತ್ತು ಎನ್ನಲಾಗಿದೆ. ಹೀಗಾಗಿ, ಕಸ್ತೂರಿ ಈ ಮಾತನ್ನು ಹೇಳಿದ್ದಾರೆ.
https://twitter.com/Manu_Dacchu45/status/1802357980362338675?ref_src=twsrc%5Etfw%7Ctwcamp%5Etweetembed%7Ctwterm%5E1802357980362338675%7Ctwgr%5E2ed37804b96e9b3af6b2965561dbeb4f304e7b51%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fudayavani-epaper-dh93f3fa93d15a477e87db2b32d6c0b8c3%2Ftrainmishapkaanchanajungaekspresgedikkihodedhagudsrailuhalavarigegaaya-newsid-n618062418
‘ಸೆಲೆಬ್ರಿಟಿಗಳಿಗೆ ಅಶ್ಲೀಲ ಮೆಸೇಜ್ ಕಳುಹಿಸುವ ಹಕ್ಕನ್ನು ಸಾರ್ವಜನಿಕರಿಗೆ ನೀಡಿದ್ಯಾರು? ದರ್ಶನ್ ಶಾರ್ಟ್ ಟೆಂಪರ್ ವ್ಯಕ್ತಿ. ಆ ವ್ಯಕ್ತಿಗೆ ದರ್ಶನ್ ಹಾಗೂ ಅವರ ಅಭಿಮಾನಿಗಳು ಹೊಡೆದು ಪಾಠ ಕಲಿಸಬೇಕು ಎಂದುಕೊಂಡಿದ್ದರೇನೋ. ಈ ವೇಳೆ ಮೃತಪಟ್ಟಿದ್ದಾನೆ. ರಶ್ಮಿಕಾ ಮಂದಣ್ಣ ಅವರ ಮುಖವನ್ನು ಎಡಿಟ್ ಮಾಡಿ ಅವರಿಗೆ ಸಾಕಷ್ಟು ತೊಂದರೆ ಕೊಡಲಾಗಿದೆ. ಎಲ್ಲರೂ ಈ ರೀತಿ ಮಾಡುತ್ತಿದ್ದಾರೆ ಎಂದರೆ ಯಾರಿಗೂ ತಡೆದುಕೊಳ್ಳೋಕೆ ಆಗಲ್ಲ’ ಎಂದು ಕೋಪ ಹೊರ ಹಾಕಿದ್ದಾರೆ ಅವರು.
‘ಉದ್ಯಮಿ, ರಾಜಕಾರಣಿಗಳಿಗೆ ಈ ರೀತಿ ಆದರೆ ಅದನ್ನು ಮಾಡಿದವನು ಕಾಣೆಯಾಗಿಬಿಡುತ್ತಾನೆ. ಆದರೆ, ಫಿಲ್ಮ್ಸ್ಟಾರ್ಸ್ಗೆ ಈ ರೀತಿ ಆದರೆ ಅವರು ಇದನ್ನು ತಡೆದುಕೊಳ್ಳಬೇಕು. ಎಷ್ಟು ಎಂದು ತಡೆದುಕೊಳ್ಳೋಕೆ ಆಗುತ್ತದೆ? ಒಮ್ಮೆ ಸಿಡಿಯುತ್ತಾರೆ. ಜನರು ಕೊಂಚ ಕರುಣೆ ತೋರಿಸಬೇಕು’ ಎಂದು ಅವರು ಕೋರಿದ್ದಾರೆ. ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದರು. ಈ ಕಾರಣದಿಂದಲೇ ದರ್ಶನ್ ಅವರು ಸಿಡಿದೆದ್ದರು. ಅವರು ತಮ್ಮ ಗ್ಯಾಂಗ್ ಜೊತೆ ಸೇರಿ ರೇಣುಕಾ ಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ.