Connect with us

    LATEST NEWS

    ರಾಷ್ಟ್ರಧ್ವಜದ ಹತ್ತಿರವೇ ಬರದ ಹಕ್ಕಿ – ಕ್ಯಾಮರಾ ಟ್ರಿಕ್ಸ್ ನಲ್ಲಿ ವೈರಲ್ ವಿಡಿಯೋ

    ಕೇರಳ ಅಗಸ್ಟ್ 17: ಕೇರಳದಲ್ಲಿ ಹಕ್ಕಿಯೊಂದು ಸ್ವಾತಂತ್ರ್ಯ ದಿನದಂದು ರಾಷ್ಟ್ರ ಧ್ವಜಾರೋಹಣ ಮಾಡುವಾಗ ಕಂಬದ ತುದಿಯಲ್ಲಿ ಸಿಲುಕಿಕೊಂಡಿದ್ದ ಧ್ಪಜವನ್ನು ಬಿಚ್ಚಿ ಹೋಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಟ್ವಿಟ್ಟರ್​ನಲ್ಲಿ @ಶಿಲ್ಪಾ_ಸಿಎನ್​ ನಲ್ಲಿ ಹಂಚಿಕೊಳ್ಳಲಾಗಿರುವ ವೈರಲ್ ವಿಡಿಯೋದಲ್ಲಿ ಶಾಲೆಯೊಂದರಲ್ಲಿ ಶಿಕ್ಷಕರು ಮತ್ತು ಮಕ್ಕಳು ರಾಷ್ಟ್ರಧ್ವಜವನ್ನು ಹಾರಿಸುವಾಗ ಅದು ಮೇಲ್ಭಾಗದಲ್ಲಿ ಸಿಲುಕಿಕೊಂಡಿದೆ. ಎಷ್ಟೇ ಹಗ್ಗ ಎಳೆದರೂ ಬಾವುಟ ಬಿಚ್ಚಿಕೊಂಡಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಹಕ್ಕಿಯೊಂದು ಧ್ವಜಾರೋಹಣ ಮಾಡಿ ತಕ್ಷಣ ಹಾರಿಹೋಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಕೆಲವೇ ಗಂಟೆಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

    ಆದರೆ ನಡೆದಿದ್ದೆ ಬೇರೆ ಇದೇ ಸಂದರ್ಭದಲ್ಲಿ ಬೆರೆಯೊಬ್ಬರು ತೆಗೆದಿರುವ ವಿಡಿಯೋ ಇದೀಗ ವೈರಲ್ ಆಗಿದ್ದು. ಅದರಲ್ಲಿ ನಿಜವಾಗಿಯೂ ಅಲ್ಲಿ ನಡೆದಿರುವ ಘಟನೆಯನ್ನು ತೋರಿಸುತ್ತಿದೆ. ಮೊದಲಿನ ವಿಡಿಯೋದಲ್ಲಿರುವ ಹಕ್ಕಿಯೂ ಧ್ವಜಸ್ತಂಬದತ್ತ ಸುಳಿದೇ ಇರಲಿಲ್ಲ. ದೂರದಲ್ಲಿರುವ ತೆಂಗಿನ ಮರದಲ್ಲಿ ಹಕ್ಕಿ ಕುಳಿತಿದ್ದು, ಬಳಿಕ ಅದು ಹಾರಿ ಹೋಗಿದೆ. ಆದರೆ ಒಂದು ಕ್ಯಾಮರಾ ಆ್ಯಂಗಲ್ ನಲ್ಲಿ ತೆಗೆದು ವಿಡಿಯೋದಲ್ಲಿ ಹಕ್ಕಿ ಬಂದು ರಾಷ್ಟ್ರ ಧ್ವಜ ಹಾರಿಸಿದ ಹಾಗೆ ಕಾಣಿಸಿದೆ. ಆದರೆ ಇನ್ನೊಂದು ವಿಡಿಯೋದಲ್ಲಿ ಹಕ್ಕಿ ರಾಷ್ಟ್ರ ಧ್ವಜದ ಹತ್ತಿರವೇ ಬಂದಿಲ್ಲ ಎನ್ನುವುದು ಗೊತ್ತಾಗಿದೆ.

    Share Information