Connect with us

    LATEST NEWS

    ದಿನಕ್ಕೊಂದು ಕಥೆ- ಪಾ(ಪ)ದ ಯಾತ್ರೆ

    ಪಾ(ಪ)ದ ಯಾತ್ರೆ

    ದೇವರನ್ನು ಕಾಣಲು ಧಾವಿಸುತ್ತಿದೆ ಮನಸ್ಸು. ಮನೆಯ ತೊರೆದು ದಿನಗಟ್ಟಲೇ ಪಾದವ ಸವೆಸಿ ನಡೆದು ಅವನ ಗುಡಿಯ ತಲುಪುವ ತವಕ .ಒಂದು ಭಕ್ತಿಯ ಲಹರಿ ದೇಹದೊಳಗೆ ಇಳಿದು ತಲುಪಿಸುತ್ತಿದೆ ಅವನಲ್ಲಿಗೆ . ಹೊರಟಿದೆ ಜಾತ್ರೆ ಮೈಲುಗಳು ಕಳೆದು ಹಾದಿ ಮುಗಿಯುತ್ತದೆ.

    ಸಿಂಹಾವಲೋಕನದಿ ಒಮ್ಮೆ ತಿರುಗಿ ನೋಡಿದರೆ ಅವನ ತಲುಪುವ ಹರಸಾಹಸದ ಒಂದಿನಿತೂ ಫಲ ದೊರಕದು ಎಂದೆನಿಸುತ್ತಿದೆ‌. ಅಲ್ಲಿ ಅವನೇ ಮೆಚ್ಚಲಿಕ್ಕಿಲ್ಲ. ಪಾಪವ ಕಳೆದು ಪುಣ್ಯ ಸಂಪಾದಿಸಿ ಬೇಕಾದವರು ಮತ್ತೆ ಪಾಪದ ಮೂಟೆಯನ್ನು ಹೆಗಲಮೇಲೆ ಹೊತ್ತು ಬಂದಿದ್ದಾರೆ. ಒಮ್ಮೆ ನೋಡಿ ಅವನ ಬಳಿಗೆ ಸಾಗುವ ಹಾದಿ ಹೇಗೆ ಉಳಿದಿದೆ. ಹಸಿರಿನ ವನಸಿರಿಯಲ್ಲಿ ಕಂಗೊಳಿಸಿ ನಿಡಿದಾಗಿ ಉಸಿರಾಡುತ್ತಿದ್ದ ಮರ-ಗಿಡಗಳು ಪರಿತಪಿಸುತ್ತಿವೆ.

    ನಮ್ಮ ತೀಟೆಗಳಿಗೆ ಪ್ಲಾಸ್ಟಿಕ್ ಕಸಗಳು ಹಾದಿಯಲ್ಲಾ ಚೆಲ್ಲಿ ಮಲಿನ ಮಾಡಿ ಅದೇನು ಶುದ್ಧರಾಗುತ್ತೇವೋ ಗೊತ್ತಿಲ್ಲ .ನಮಗೆ ಬುದ್ಧಿ ಇಲ್ಲ, ವಿವೇಚನೆ ಇಲ್ಲ, ನಮ್ಮ ಅಮ್ಮನಿಗೆ ಹೇಸಿಗೆ ಹೊರಿಸಿ, ಕೊಳಕಿನ ಬಟ್ಟೆ ಉಡಿಸಿ, ಉಸಿರಾಡಲು ಆಗದಂತಹ ಪರಿಸ್ಥಿತಿ ನಿರ್ಮಿಸಿ, ನಾವೀಗ ಮಾರಾಟಕ್ಕಿರುವುದು ಯಾಕೆ?

    ಆ ಕಾಡಿನ ಕಾಡುವ ಕೂಗು ಕೇಳಿಸದ ನಾವು ನಪುಂಸಕರೆ ಸರಿ !.ಒಮ್ಮೆ ನೀವು ನಡೆದು ಬಂದ ಹಾದಿ ನೋಡಿ ಇಲ್ಲಿ ಉಳಿಸಲಾಗದ್ದನ್ನ ಅಲ್ಲಿ ಕೈಮುಗಿದು ಗಳಿಸುವುದು ಏನು ?.ವ್ಯರ್ಥ ಪ್ರಯತ್ನ ಪ್ರದರ್ಶನಕ್ಕಷ್ಟೇ ಸೀಮಿತ….

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply