LATEST NEWS
ದಿನಕ್ಕೊಂದು ಕಥೆ- ಶಾಹಿ

ಶಾಹಿ
ಶಾಹಿಯ ಹನಿಯೊಂದು ಕಾಗದದ ಮೇಲೆ ಉರುಳಿದೆ ಎಂದರೆ ಏನು ಹೇಳಲು ಹೊರಟಿದೆ ಎಂದರ್ಥ. ಅದು ಆಂತರ್ಯಕ್ಕೋ ಬಾಹ್ಯಕ್ಕೋ ಶಾಯಿಯ ಬರವಣಿಗೆ ಮುಗಿದು ಪೂರ್ಣವಿರಾಮ ಇಟ್ಟ ಮೇಲೆ ಸುಲಭಗ್ರಾಹ್ಯ ಸಾಧ್ಯವಾಗುವುದಿಲ್ಲ. ಇಲ್ಲೊಂದು ಶಾಹಿಯ ಹನಿ ಹೇಳಿದ ಕಥೆಯನ್ನು ನಿಮಗೆ ದಾಟಿಸುವುದು ನನ್ನ ಧರ್ಮ.
” ಅಲ್ಲಿ ಹಸೆಮಣೆಯಲ್ಲಿ ಅಲಂಕೃತಳಾದ ಹೆಣ್ಣು ಕೂತಿದ್ದಾಳೆ .ಪಕ್ಕದಲ್ಲಿರೋನು ಸುಂದರಾಂಗನೆ .ಕ್ಯಾಮೆರಾ ಕ್ಲಿಕ್ಕಿಸುತ್ತಿದೆ. ಕೋಣೆಯಲ್ಲಿ ಪಾತ್ರೆ ಉರುಳುತ್ತಿದೆ ,ಪರಿಮಳ ಪಸರಿಸುತ್ತಿದೆ, ಬಣ್ಣಬಣ್ಣದ ಬಟ್ಟೆಗಳು ಓಡಾಡುತ್ತಿವೆ. ನಗುವಿನ ಸಂಭ್ರಮ ಅಕ್ಷತೆಗಳನ್ನು ಕೈಯಲ್ಲಿ ಹಿಡಿದಿವೆ. ತಾಳಿಯ ಬಿಗಿತದೊಂದಿಗೆ ಅಕ್ಷತೆಗಳು ಹಾರಿ ನೆಲದಮೇಲೆ ಕುಣಿದಿವೆ.

ಮನೆಯವರಿಗೆ ನೆಮ್ಮದಿಯ ಉಸಿರೊಂದು ಹೊರಬಿತ್ತು .ಊಟದ ಮನೆ ತುಂಬಿತು, ಸಭಾಂಗಣ ಖಾಲಿಯಾಯಿತು, ಗಾಡಿಗಳು ಹೊರಟವು ,ಕ್ಯಾಮೆರಾ ಅವಳ ಕಣ್ಣಿನ ಹನಿಯನ್ನು ಗಮನಿಸಲೇ ಇಲ್ಲ .ಯಾರ ಕಣ್ಣಿನ ಕ್ಯಾಮೆರಾವೂ ಕೂಡ .ಎಲ್ಲವೂ ಚಿನ್ನ ಬಟ್ಟೆಗಳ ಗಮನಿಸುವುದರಲ್ಲಿ ಸುಸ್ತಾಗಿದ್ದರು.ಅವಳು ಹೇಳುವ ಕಥೆಯನ್ನು ಕೇಳುವವರಲ್ಲಿ ಯಾರು ಇಲ್ಲ.
ಇನ್ನೂ ಹೇಳುವ ಮಾತೆಂದರೆ” ಕಾಲ ಮುಗಿಯಿತು “,ಎಲ್ಲ ದೇವಿ ಇಲ್ಲಿ ಪ್ರೀತಿ, ತ್ಯಾಗವಾಯಿತು ವಯಸ್ಸಿನ ಅಂತರವೂ ನೋವಿನ ಹನಿಯೂ ಭಯದ ನೀರು ಪ್ರಶ್ನೆಗಳಿಗೆ ಉತ್ತರಿಸಬೇಕಾದ ವಳು ಅವಡುಗಚ್ಚಿ ಗಾಡಿ ಏರಿದ್ದಾಳೆ ನೋಡುವವರಿಗೆ ತವರುಮನೆ ತೊರೆಯುವಂತೆ ಕಂಡರೆ ಅವಳ ಮನಸ್ಸಿನ ಮುಖ ಬೇರೇನೂ ಹೇಳುತ್ತಿದೆ .ಇನ್ನೂ ಅದು ಮೌನವಾಗುತ್ತದೆ ಅಡುಗೆ ಕೋಣೆಯಲ್ಲಿ ಪಾತ್ರೆಗಳ ನಡುವೆ ಶಬ್ದ ನಿಲ್ಲುತ್ತದೆಎಲ್ಲವೂ ಸತ್ತು ಹೋಗುತ್ತದೆ
ಧೀರಜ್ ಬೆಳ್ಳಾರೆ