Connect with us

LATEST NEWS

ದಿನಕ್ಕೊಂದು ಕಥೆ- ಕುರ್ಚಿ

ಕುರ್ಚಿ

ಮಸ್ಥಿತಪ್ರಜ್ಞನಂತೆ ಕಾಯುತ್ತಿದ್ದಾನೆ .ಗುಡ್ಡದ ಮೇಲೆ ಕುಳಿತಿದ್ದಾನೆ. ಇಲ್ಲಿ ಕುಳಿತು ಕಾಯುತ್ತಿದ್ದನೋ, ಕಾದು ಕುಳಿತಿದ್ದಾನೋ ಗೊತ್ತಿಲ್ಲ. ಈ ಎತ್ತರಕ್ಕೇರ ನಿಂತದಕ್ಕೇನೆಂದರೆ ಇದನ್ನ ಏರಿ ಇಲ್ಲಿಗೆ ತಲುಪುವ ವ್ಯಕ್ತಿ ಸುಸ್ತಿನಲ್ಲಿ ಧರಾಶಾಹಿಯಗುವ ಪರಿಸ್ಥಿತಿಯಲ್ಲಿರುವಾಗ ಅವನಿಗೆ ಆಸನ ನೀಡಿದರೆ ಅವನಷ್ಟು ನೆಮ್ಮದಿಯ ಉಸಿರು ಬಿಡುವವರು ಮತ್ತೆ ಯಾರೂ ಬರುವುದಿಲ್ಲ.

“ಹಾಗಾಗಿ ಅವನು ಕುರ್ಚಿ ಆಗಿದ್ದಾನೆ ” ಸಣ್ಣ ಕಣಗಳೆಲ್ಲ ಒಂದಾಗಿ ಈ ರೂಪ ಧರಿಸಿ ನಿಂತಿರುವ ಹಿಂದೆ ಹಲವಾರು ಜನರ ಪರಿಶ್ರಮದ ಕೈಗಳಿವೆ, ಗಾಯದ ನೋವುಗಳಿವೆ, ಮಾಯದ ಕಲೆಗಳಿವೆ.ಕುಳಿತವನಿಗೆ ಅದ್ಯಾವುದೂ ನೆನಪಿಗೆ ಬರುವುದಿಲ್ಲ. ಆಯಾಸದ ಮಟ್ಟ ಇಳಿದು ಉಸಿರಾಟ ನಿಜ ಸ್ಥಿತಿ ತಲುಪಿದಾಗ ಯೋಚನೆ ಮತ್ತೆ ಜಾಗ್ರತವಾಗುತ್ತದೆ ?.

ಇಲ್ಲಿನ ಗಾಳಿ ಒಂದುಚೂರು ಬಡ್ಡಿದರ ಪಾವತಿಸದೆ .ಉಚಿತವಾಗಿ ತಂಪನ್ನು ಹಂಚುತ್ತಿದೆ. ಸುಂದರ ದೃಶ್ಯಗಳು ಮನಸ್ಸಿನಲ್ಲಿ ನೆಲೆಯಾಗಲು ಈ ಕುರ್ಚಿ ಸಹಾಯವನ್ನು ಮಾಡುತಿದೆ. ಸುಂದರತೆಯನ್ನು ಆಸ್ವಾದಿಸಲು ಮನಸ್ಸು ಶಾಂತಿಯಿಂದಿರಲಿ. ಅದಕ್ಕೆ ಈ ಕುರ್ಚಿ ತನ್ನ ಜೀವನವನ್ನೇ ವ್ಯಯಿಸಲು ಸ್ಥಿರವಾಗಿದೆ. ಬಳಸುವವರ ಗುಣ ನಡತೆಗಳು ಕಾಲ ಗತಿಸಿದರೂ ಕುರ್ಚಿ ಯ ಮನಸ್ಸಿನಲ್ಲಿ ಉಳಿದಿರುತ್ತದೆ. ನೀವೊಮ್ಮೆ ಅಂಡು ಊರುವ ಮೊದಲು ಎಚ್ಚರ ಕುರ್ಚಿಗೆ ಒಂದು ಮನಸ್ಸಿದೆ ಅಲ್ಲವೇ…

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *