Connect with us

    LATEST NEWS

    ಮುಂಜಾನೆ ಮಳೆ ಅಬ್ಬರಕ್ಕೆ ಪಂಪ್ ವೇಲ್ ಪ್ಲೈಓವರ್ ಜಂಕ್ಷನ್ ಜಲಾವೃತ…!!

    ಮಂಗಳೂರು ಮೇ 29: ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದ್ದು, ಇಂದು ಮುಂಜಾನೆ ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಕೆಲವು ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.


    ಇಂದು ಮುಂಜಾನೆ ಭರ್ಜರಿ ಮಳೆಯಾಗಿದ್ದು ಮಳೆಯ ಅಬ್ಬರಕ್ಕೆ ನಗರದ ಪಂಪ್‌ವೆಲ್ ವೃತ್ತದಲ್ಲಿ ನೀರು ಸೇರಿ ಹರಿದು ಹೋಗದೆ ಸಂಚಾರಕ್ಕೆ ಅಡ್ಡಿಯಾಯಿತು. ಬೆಳಗ್ಗೆ ಸುಮಾರು 5ರಿಂದ ಇಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೇರಿಕೊಂಡಿದ್ದು ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ ಗೊಂಡಿತು. ಪಂಪ್ ವೆಲ್ ಮೇಲ್ ಸೇತುವೆಯ ಕೆಳಗೆ ಜಂಕ್ಷನ್ ನಲ್ಲಿ ಕೂಡಾ ಅಪಾರ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು, ಅಲ್ಲದೆ ಪಡೀಲ್ ಅಂಡರ್ ಪಾಸ್, ಕೊಟ್ಟಾರ ಚೌಕಿಯಲ್ಲೂ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಂಟಾಗಿತ್ತು.

     

    Share Information
    Advertisement
    Click to comment

    You must be logged in to post a comment Login

    Leave a Reply