Connect with us

    LATEST NEWS

    ದಿನಕ್ಕೊಂದು ಕಥೆ- ಕೊಟ್ಟ ಮಾತು

    ಕೊಟ್ಟ ಮಾತು

    ಅವನು ನಂಗೆ ತುಂಬಾ ಸಮಯದಿಂದ ಪರಿಚಯ ,ಅವನು ನಮ್ಮ ಶಾಲೆಯವನಲ್ಲ ಪಕ್ಕದ ಮನೆಯವನೂ ಅಲ್ಲ ಆದರೆ ಅಲ್ಲಲ್ಲಿ ಕಾಣಸಿಗುತ್ತಾನೆ. ಪುಟ್ಟ ಅಂಗಡಿಗಳಲ್ಲಿ, ಮಾರ್ಗ ಬದಿಯಲ್ಲಿ, ತರಗತಿಯ ಮೂಲೆಯಲ್ಲಿ ,ಹೀಗೆ ದಿನಕ್ಕೆ ಎಷ್ಟೋ. ಸಲ ಭೇಟಿಯಾಗಿದ್ದಾನೆ.

    ಅವನಿಗೂ ದುರಭ್ಯಾಸ ಗಳಿಲ್ಲ, ಅದಕ್ಕಿಂತಲೂ ಭೀಕರವಾದದ್ದು ಹೊಸ ಕಾಯ್ದೆ ಯೊಂದಿದೆ “ಮಾತು ಕೊಡುವುದು” ಅಸಾಧ್ಯವಾದದ್ದನ್ನು ಮೈಯಿಗೆ ಎಳೆದುಕೊಂಡು ಕೊನೆಗೆ ಮೈ ಪರಚಿಕೊಳ್ಳುವ ಪರಿಸ್ಥಿಸಿ. ಅನಗತ್ಯ ಮಾತುಗಳೊಂದಿಗೆ ಕೆಲವೊಮ್ಮೆ ಪೂರ್ತಿಗೊಳಿಸುತ್ತಾನೆ ಇನ್ನೊಮ್ಮೆ ಅಲ್ಲೇ ನಿಲ್ಲಿಸುತ್ತಾನೆ.

    ಖಂಡಿತ ಮಾಡ್ತೀನಿ ,ಇನ್ಯಾವ ಮಾತುಗಳು ಇಲ್ಲ. ನನ್ನ ನಗುವನ್ನು ಅಡವಿಟ್ಟು ಹೊರಬರುವಂತೆ ಕಾಣುತ್ತಿದ್ದಾನೆ. ಮನಸ್ಸಿನ ಮಂಥನವನ್ನು ಕುಡಿಯಲೇ ಬೇಕು ಅಲ್ಲ. ಮೇಲ್ಪದರದ ಸವಿಯನ್ನು ಸವಿದು ಒಳಗಿನ ಒಳಗಿನ ರುಚಿಯನ್ನು ಆಸ್ವಾದಿಸದೇ ಹೋದರೆ ಹೇಗೆ ?. ಕೆಲಸ ಆಗಲೇಬೇಕು ಎಂಬ ಯೋಚನೆಯಿಂದ ಕ್ಷಣಗಳನ್ನು ಆಸ್ವಾದಿಸದೇ ವಿಧಿ ಇಲ್ಲ.

    ಮಾತು ಕೊಡುತ್ತಾನೆ ಪರದಾಟಗಳು ದೊಂಬರಾಟಗಳ ನಡುವೆ ಸಿಲುಕು ಹೊರಬರಲಾಗದೆ ಚಡಪಡಿಸುತ್ತಾ ಹನಿ ನೀರಿಗಾಗಿ ಕಾಯುತ್ತಿರುತ್ತಾನೆ. ಹೊಸ ಜಗತ್ತೊಂದು ಅವನ ಕಣ್ಮುಂದೆ ತೆರೆದುಕೊಳ್ಳಲಾರಂಭಿಸಿದೆ, ಯಾರೋ ಕೆಲಸದ ಪಟ್ಟಿ ಹಿಡಿದು ಆಗಮಿಸಿದರು ಇವನಂತೂ ಕೆಲಸ ಮಾಡುವ ಮಾತು ಕೊಟ್ಟೇ ಬಿಟ್ಟಿದ್ದ, ಮುಂದಿನ ದಿನ ಹೇಗೋ……ಕೊಟ್ಟ ಮಾತು ….

    ಧೀರಜ್ ಬೆಳ್ಳಾರೆ,

    Share Information
    Advertisement
    Click to comment

    Leave a Reply

    Your email address will not be published. Required fields are marked *