Connect with us

    LATEST NEWS

    ದಿನಕ್ಕೊಂದು ಕಥೆ- ಸಾವು

    ಸಾವು

    ಅವನಿಗೆ ಸಿಗಬೇಕಾದ ಗೌರವ ಕಡಿಮೆಯಾಗುತ್ತಿದೆ ಅನ್ನಿಸುತ್ತಿದೆ .ಆತನನ್ನ ಜೀವನದಲ್ಲಿ ಒಮ್ಮೆ ಭೇಟಿಯಾಗಿ ಅವನ ಜೊತೆಗೆ ಬದುಕುವವರು ನಾವು .ಬದುಕುವ ಜಾಗ ಮಣ್ಣಿನೊಳಗೋ, ಅಥವಾ ಬೂದಿಯೊಳಗೋ ಗೊತ್ತಿಲ್ಲವಷ್ಟೆ . ಮೊದಲೆಲ್ಲ ಆತನನ್ನ ಸಂಧಿಸುವುದು, ಜೀವನದ ಕೊನೆಯ ತನಕ ಹೋರಾಡಿ, ಬದುಕನ್ನ ಆಸ್ವಾದಿಸಿ, ಗೌರವದಿಂದ ಸ್ವಾಗತಿಸಿ ,ಬೀಳ್ಕೊಟ್ಟು ನಂತರ ಹೊರಡುವ ಪರಿಪಾಠವಿತ್ತು.

    ಅವನು ಯಾರನ್ನಾದರೂ ಭೇಟಿಯಾಗಿ ಜೊತೆಗೆ ಕರೆದುಕೊಂಡು ಹೊರಟರೆಂದರೆ ನಮ್ಮೊಳಗೆ ತಾಕಲಾಟಗಳು ಏಳುತ್ತಿತ್ತು. ಹೃದಯದೊಳಗೊಂದು ಸಣ್ಣ ಮಿಡಿತ ಎಚ್ಚರಿಕೆಯ ಕಂಪನವನ್ನು ನೀಡುತ್ತಿತ್ತು. ಜೊತೆಗೆ ಅವನಾಗಿಯೇ ನಮ್ಮನ್ನು ಆರಿಸುವವರೆಗೂ ನಾವು ಉಸಿರಿನೊಂದಿಗೆ ಆಡುತ್ತಿದ್ದೆವು.

    ಈಗ ಬದಲಾಗಿದೆ ಅವನಾಗಿ ನಮ್ಮನ್ನು ಆರಿಸುವ ಮೊದಲೇ ನಮಗೆ ಹೊರಡುವ ಆತುರ ಹೆಚ್ಚಾಗಿದೆ. ಅವನು ಯಾರನ್ನಾದರೂ ಕರೆದುಕೊಂಡುನೆಂದರೆ ಒಳಗೇನು ಕಂಪನವೇ ಮಾಡುತ್ತಿಲ್ಲ . ಮೂಡಿದರೂ ಕ್ಷಣದಲ್ಲಿ ಮಾಯವಾಗುತ್ತಿದೆ. ಅವನು ನಮಗಾಗಿ ಕಾಯಬೇಕು. ಬದುಕನ್ನು ಅನುಭವಿಸಿ ನಾವು ಹೊರಡಬೇಕು ಹಾಗಿದ್ದಾಗ ಅವನಿಗೂ ಗೌರವ ನಮಗೂ ಗೌರವ…..ಅಲ್ವಾ..

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *