LATEST NEWS
ದಿನಕ್ಕೊಂದು ಕಥೆ- ಕ್ರೌರ್ಯ
ಕ್ರೌರ್ಯ
“ಮೌನದ ಸೌಂದರ್ಯವನ್ನು ಆಸ್ವಾದಿಸಿ ಮನಸ್ಸು ಬೆಳಗುತ್ತದೆ” ಅಂತ ಆಗಾಗ ಇಂದು ರೀತಿ ಮೇಡಂ ಹೇಳ್ತಾ ಇರ್ತಾರೆ . ಅದನ್ನೇ ನಂಬಿದವನಿಗೆ ಅದು ಅಲ್ಲ ಗದ್ದಲದಲ್ಲೂ ಸೌಂದರ್ಯವಿದೆ ಅಂತ ನಿನ್ನೆ ಮಾರುಕಟ್ಟೆಗೆ ತೆರಳಿದಾಗಲೇ ತಿಳಿದದ್ದು. ತರಕಾರಿಗಳ ಸಾಲು ಸಾಲು ಅಂಗಡಿಗಳ ಮೆರವಣಿಗೆ ನಿಂತಿದೆ.
ಬಣ್ಣಬಣ್ಣದ ತರಕಾರಿಗಳು ರಾಶಿಗಳಾಗಿ ಮಲಗಿ ಬಂದವರನ್ನು ಕರೆಯುತ್ತಿದೆ . ಇಪ್ಪತ್ತು, ನಲುವತ್ತು, ಕೆಜಿಗೆ ಹತ್ತುಗಳ ಕೂಗು ಸ್ಪರ್ಧೆಗೆ ಒಡ್ಡಿದೆ. ಕೂಗು ಬದುಕು ಕಟ್ಟುತ್ತಿದೆ. ಮನೆಯ ಮಗನು ತರಕಾರಿ ತೂಕ ಮಾಡುತ್ತಿದ್ದಾನೆ. ಇವರ ಮನೆಯಲ್ಲಿ ಅನ್ನ ಬೇಯಲು ಬೇರೆಯವರ ಮನೆಯಲ್ಲಿ ತರಕಾರಿ ಬೇಯಬೇಕಾಗಿದೆ.
ಕತೆಗಳು ಸಾವಿರ ಮಾತನಾಡುತ್ತಿವೆ.ಪ್ರತಿಯೊಂದು ಕೂಗಿನ ಹಿಂದಿನ ಕಥೆಯು ದೊಡ್ಡದು. ಕುಳಿತು ಮಾತನಾಡಲು ಸಮಯವಿಲ್ಲ ನೋಡಿ ಹೊರಟೆ….
ಗದ್ದಲವು ನನ್ನೊಳಗೆ ಮೌನದ ತಂತಿ ಮೀಟಿತು. ಸೌಂದರ್ಯ ರಾಗವನ್ನು ಹಾಡಿತು. ಗದ್ದಲ ಮೌನಗಳು ನೋಡುವ ಮನಸ್ಸಲ್ಲೇ ಇರೋದು ಅನ್ನಿಸಿತು ….
ಧೀರಜ್ ಬೆಳ್ಳಾರೆ