LATEST NEWS
ದಿನಕ್ಕೊಂದು ಕಥೆ- ಗದ್ದಲ
ಗದ್ದಲ
ಬೆಂಕಿ ಅಳುತ್ತಲೇ ಕಾರ್ಯವ ಮಾಡುತ್ತಿದೆ .ಗಾಳಿ ಬೇಡವೆಂದು ಬಲವಾಗಿ ಬೀಸಿದರು ಬೆಂಕಿಯ ಪ್ರಖರತೆ ಹೆಚ್ಚಿದೆ. ಕಾರಣವ ತಿಳಿದುಕೊಳ್ಳಲು ಹತ್ತಿರ ಧಾವಿಸಲು ಶಾಖ ಬಿಡುತ್ತಿಲ್ಲ. ನಂದಿ ಹೋಗಿ ಕೊನೆಗೆ ಬೂದಿ ಉಳಿದ ಮೇಲೆ ಸುಟ್ಟದ್ದೇನು ಅನ್ನೋದು ಗೊತ್ತಿಲ್ಲ.
ಮೌನ ಪ್ರೇಕ್ಷಕನಾಗಿ ಕಿಟಕಿಯ ಸರಳುಗಳ ನಡುವಿನಿಂದ ಅಳುತ್ತಾ ನಿಂತಿದ್ದ ಹುಡುಗನನ್ನು ಕರೆದು ಕೇಳಿದಾಗ “ಮನೆ ಜಗಲಿಯಲ್ಲಿ ದಿನಾ ಬೆಳಗ್ಗೆ ಹಕ್ಕಿಯ ಹಿಕ್ಕಿಯ ಚಿತ್ತಾರ ಮೂಡುತ್ತಿತ್ತು .ಅಪ್ಪ ಕೆಲವು ದಿನ ಓಡಿಸಿದರು… ಆದರೂ ಅದರ ರಂಗೋಲಿ ಹಾಗೇಯೇ ಇತ್ತು. ಅಪ್ಪ ಜನರನ್ನು ಕರೆಸಿ ಇಡೀ ಮರವನ್ನು ಬೋಳುಗೊಳಿಸಿದರು .ಆದರೆ ಮರುದಿನ ಹಕ್ಕಿಯ ಹಿಕ್ಕೆ ಕೆ ಜಗುಲಿ ಮೇಲೆ ರಾರಾಜಿಸುತ್ತಿತ್ತು.
ಶಾಶ್ವತ ಪರಿಹಾರಕ್ಕಾಗಿ ಹಕ್ಕಿಗಳಿಗೆ ಬಲೆ ಹಾಕಿದರೂ ಗುಂಡು ಹೊಡೆದರು ಎಲ್ಲವನ್ನ ಹಿಡಿದು ಬೆಂಕಿ ಹಾಕಿದರು. ಎಲ್ಲವೂ ಬೂದಿಯಾದವು. ಜೀವ ಸಾಯಲು ಕಾರಣ ನಿರ್ಜೀವ ಮನಸ್ಸಿನ ಜೀವವೊಂದು…
ಮನುಷ್ಯರು ಮಾನವರಾಗೋದು ಯಾವಾಗ
ಧೀರಜ್ ಬೆಳ್ಳಾರೆ