Connect with us

LATEST NEWS

ಬಪ್ಪನಾಡು ದುರ್ಗಾಪರಮೇಶ್ವರಿ ದರ್ಶನ ಪಡೆದ ಡಿಂಪಲ್ ಕ್ವೀನ್ ರಚಿತಾ ರಾಮ್

ಮುಲ್ಕಿ ಡಿಸೆಂಬರ್ 23: ಕನ್ನಡದ ಖ್ಯಾತ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮುಲ್ಕಿ ಬಪ್ಪನಾಡು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಮಂಗಳೂರಿಗೆ ಆಗಮಿಸಿದ ಅವರು ಮುಲ್ಕಿ ಬಪ್ಪನಾಡು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ದೇವಳದ ವತಿಯಿಂದ ನಟಿ ರಚಿತಾ ರಾಮ್ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು. ಇನ್ನು ದೇವಸ್ಥಾನದಲ್ಲಿ ರಚಿತಾ ರಾಮ್ ಕಂಡು ಅಭಿಮಾನಿಗಳು ಸೆಲ್ಫಿ ತೆಗೆಸಿಕೊಂಡರು.


ಇದೇ ಸಂದರ್ಭ ಮಾತನಾಡಿದ ರಚಿತಾ ರಾಮ್ ಕರಾವಳಿಯ ದೇವಸ್ಥಾನಗಳು ಭಕ್ತಿಯ ತಾಣಗಳಾಗಿದ್ದು ಎಲ್ಲರಿಗೂ ಹೊಸವರ್ಷದ ಶುಭಾಶಯಗಳೊಂದಿಗೆ ದೇವರು ಆಯುರಾರೋಗ್ಯ ಐಶ್ವರ್ಯ ನೀಡಲಿ ಎಂದರು. ಪ್ರತಿ ವರ್ಷ ಬಪ್ಪನಾಡು ಕ್ಷೇತ್ರಕ್ಕೆ ಬರುತ್ತೇನೆ ಈ ಬಾರಿಯೂ ಬಂದಿದ್ದೇನೆ ಎಂದರು. ನನಗೆ ಮಂಗಳೂರಿನ ಪಬ್ಬಾಸ್ ಐಸ್ ಕ್ರೀಂ ಹಾಗೂ ಕರಾವಳಿ ಶೈಲಿಯ ವಿಶೇಷ ಖಾದ್ಯಗಳು ಹಾಗೂ ಊಟ ಬಲು ಇಷ್ಟ ಎಂದರು.

Advertisement
Click to comment

You must be logged in to post a comment Login

Leave a Reply