LATEST NEWS
ದಿನಕ್ಕೊಂದು ಕಥೆ- ಕಾಯುವಿಕೆ
ಕಾಯುವಿಕೆ
ಆಸ್ಪತ್ರೆಯ ಮುಂದಿನ ಗೇಟಿನಬಳಿ ನಿಂತಿದ್ದಾಳೆ. ಒಳಗೆ ನಿರೀಕ್ಷಿಸುತ್ತಿದ್ದಾಳೆ. ಬದುಕಿಗೋ ಸಾವಿಗೋ ಗೊತ್ತಿಲ್ಲ. ಮಳೆ ಹನಿಯುತ್ತಿದೆ ಮತ್ತೊಮ್ಮೆ ಬಿಸಿಲು ಮೂಡುತ್ತಿದೆ. ಆದರೆ ಆಕೆ ಅಚಲವಾಗಿ ಕಾಯುತ್ತಿದ್ದಾಳೆ .ಅಲ್ಲಿಂದ ಹೊರ ಬರುತ್ತಿರುವ ಅವರನ್ನು ಕಣ್ಣು ಎತ್ತರಿಸಿ ಗಮನಿಸಿ ಮತ್ತೆ ಕಾಯುತ್ತಾಳೆ.
ಅವಳ ದೂರದರ್ಶನವನ್ನು ಗಮನಿಸಿದರೆ ಆತ್ಮೀಯರಾದವರು ಒಳಗಿದ್ದಾರೆ ಅನ್ನಿಸುತ್ತಿದೆ. ಸಾಮರಸ್ಯ ಮರೆತದ್ದಕ್ಕೋ ಅಥವಾ ಅವರು ದೂರ ತಳ್ಳಿದ್ದರಿಂದಲೋ ಈಕೆ ದೂರವಾಗಿದ್ದಾಳೆ. ಮನಸ್ಸು ತಡೆಯದೇ ಯಾರಿಂದಲೂ ಸಿಕ್ಕಿದ ಸುದ್ದಿಗೆ ಇಲ್ಲಿ ಬಂದಿದ್ದಾಳೆ. ನೀರು ಕಣ್ಣಲ್ಲಿ ತುಂಬಿದೆ .ಇಳಿಯುತ್ತಿಲ್ಲ. ಇನ್ನೊಂದು ಕ್ಷಣದಲ್ಲಿ ಜಾರಬಹುದು ಅದು ಸಂಭ್ರಮಕ್ಕೂ ಸಾವಿಗೋ..
ದೂರಮಾಡುವ ಮುಂಚೆ, ಭಾವನೆಗಳನ್ನು ಓದಿ, ಹೃದಯದ ಮಾತನ್ನಾಲಿಸಿ ಮುಂದುವರಿದರೆ ಒಳ್ಳೆಯದು. ಕೆಲವೊಂದು ಕಡೆ ಅನಿವಾರ್ಯತೆ ಹೆಚ್ಚಿನ ಕಡೆಗೆ ತಲೆತಗ್ಗಿಸಿ ನಡೆಯಬೇಕಾದ ಸ್ಥಿತಿ. ನಾನು ಅಲ್ಲಿಂದ ಹೊರಟೆ ಅವಳ ಮುಖದಲ್ಲಿ ನಗು ಮೂಡಲಿ ಉಸಿರು ಹೊತ್ತ ದೇಹ ಹೊರ ಬರಲಿ ಎಂಬ ನಂಬಿಕೆಯೊಂದಿಗೆ ಅಲ್ಲಿಂದ
ಧೀರಜ್ ಬೆಳ್ಳಾರೆ