LATEST NEWS
ದಿನಕ್ಕೊಂದು ಕಥೆ- ನರಕ
ನರಕ
ನಂದನೂರನ್ನು ದಾಟಿದ ಮೇಲೆ ಸಿಗುವುದೇ ನರಕ. ನಂದನೂರು ಬಿಸಿಲಿನ ತಾಣ. ಬಿಸಿಯನ್ನು ಅನುಭವಿಸಿ ಮುಂದುವರೆದಾಗ ನಾವು ನರಕವನ್ನು ತಲುಪಬಹುದು. ಹೌದು ಇದೇ ನರಕವೇ. ಮಳೆಬಿದ್ದ ನೀರು ಎಲ್ಲೋ ವ್ಯರ್ಥವಾಗಿ ಹರಿಯುವುದಿಲ್ಲ. ಮರಗಳ ಬೃಹದಾಕಾರವಾಗಿ ನೆಲೆಯೂರಿದ್ದಾವೆ.
ಧರ್ಮಗಳು ಜಗಳಗಳ ತಾಣಗಳಾಗಿಲ್ಲ. ಶಾಲೆಗಳು ಆಸ್ಪತ್ರೆಗಳು ಸುಸಜ್ಜಿತವಾಗಿವೆ . ಶಾಲೆಗೆ ಹೋಗದೆ ಕೆಲಸಕ್ಕೆ ಹೋಗುವ ಮಕ್ಕಳು ಎಲ್ಲೋ ಕಾಣಸಿಗುವುದೇ ಇಲ್ಲ .ಪ್ರತಿಯೊಬ್ಬರೂ ಮೌಲ್ಯವನ್ನು ಕಲಿಯುವವರೇ. ಕೃಷಿ ಜೀವನಾಧಾರ. ನದಿ ಮಲಿನತೆಯನ್ನು ಮರೆತಿದೆ. ಕೊಲೆ ಸುಲಿಗೆಗಳು ಎಲ್ಲೂ ಕಾಣಸಿಗುತ್ತಿಲ್ಲ. ಹೆಣ್ಣಿಗೆ ಭಯವಿಲ್ಲ. ವರದಕ್ಷಿಣೆಯ ಸುದ್ದಿಯೇ ಇಲ್ಲ.
ನಿಜವು ನಲಿದಾಡುತ್ತಿದೆ. ಜಾಗಗಳಿಗೆ ಬೇಲಿಯಿಲ್ಲ, ನೆಲದ ಆಸೆಯಿಲ್ಲ, ಪ್ರೀತಿ ಮಾತ್ರ ಉಸಿರಾಡುತ್ತಿದೆ. ಇದು ನರಕವೇ ಅಲ್ವಾ?. ಯಾರನ್ನೂ ದ್ವೇಷಿಸದೆ ಹೊಂದಿಕೊಂಡು ಬಾಳುತ್ತಿದ್ದಾರೆ. ಹಸಿದವನಿಗೆ ಅನ್ನ ನೀಡುತ್ತ ಕೈ ಹಿಡಿದು ನಡೆದಿದ್ದಾರೆ. ಇದು ಸ್ವರ್ಗ ಹೇಗೆ ಆಗುವುದು .ಇದು ನರಕವೇ ಹೀಗಿದ್ದರೆ ,ನಾವು ಒಮ್ಮೆ ನರಕದಲ್ಲಿ ಇರೋಣ ಅನಿಸುತ್ತೆ ಅಲ್ವಾ …..
ಧೀರಜ್ ಬೆಳ್ಳಾರೆ