LATEST NEWS
ದಿನಕ್ಕೊಂದು ಕಥೆ- ಮಗಳು
ಮಗಳು
ಮರೆಯುತ್ತಾರೆ ಮಗಳೇ, ಖಂಡಿತವಾಗಿ ಎಲ್ಲರೂ . ಗೆಲ್ಲುವಿದ್ದರೆ ಜೊತೆಗಿರುವರು. ನೀನು ಸೋತಿದ್ದೀಯಾ ಹಾಗಾಗಿ ನೀನು ಅವರ ನೆನಪಿನಲ್ಲಿ ಇಲ್ಲ. ನೀನು ಹಿಂದೊಮ್ಮೆ ಗೆದ್ದಾಗ ಎಷ್ಟು ಕುಣಿಸಿದವರು ನಿನ್ನ ಮೆರೆಸಿದವರು ಇವರೇ. ಆದರೆ ನಿನ್ನ ಇಂದಿನ ಒಂದು ಸೋಲು ನಿನ್ನ ಪರಿಶ್ರಮ ಪ್ರಯತ್ನವನ್ನು ಅವರಿಗೆ ನೆನಪಿಸಲೇ ಇಲ್ಲ. ಮಗಾ ನೀನು ಇಲ್ಲಿಗೆ ತಲುಪಿರುವ ದಾರಿ ದೊಡ್ಡದು. ಸುಲಭ ಮಾರ್ಗವಲ್ಲ .
ಅಪರಿಮಿತ ಪರಿಶ್ರಮ ಇದೆ. ಇದರ ಪ್ರತಿಫಲ ಇನ್ನೆಂದಾದರೂ ಸಿಗಬಹುದು. ನೀನು ಯಾವತ್ತೂ ನನ್ನ ಮಗಳೇ. ನಿನ್ನ ಗೆಲುವು-ಸೋಲು ನನಗೆ ಸಮಾನ. ಅಪ್ಪನ ಪ್ರೀತಿ ಸದಾ ಇರುತ್ತೆ . ನಿನಗೆ ಬೇಸರವಿಲ್ಲ ಗೊತ್ತಿದೆ ನಿನ್ನ ನೆನಪಿಸಿದ್ದಕ್ಕೆ. ಆದರೆ ಬೇಸರವಿದೆ ನಿನಗೆ ನಿನ್ನ ದೇಶಕ್ಕೆ ಬಂಗಾರ ತರಲಾಗದೇ ಇದ್ದದ್ದಕ್ಕೆ. ತೊಂದರೆ ಇಲ್ಲ ಕಂದ ಮರಳಿ ಬಾ. ನಮ್ಮ ಬದುಕು ನಾವು ಬದುಕಬೇಕು. ದೊಡ್ಡ ಆಕಾಶದಲ್ಲಿ ಸಣ್ಣ ಅವಕಾಶವೂ ನಮಗಾಗಿ ಕಾದಿರಬಹುದು.
ಮುದ್ದಿನ ಮಗಳ ಬರುವಿಕೆಗೆ ನಾ ಕಾಯುತಿರುವೆ ನಿನ್ನ ಒಲುಮೆಯ ತಂದೆ ಪತ್ರ ಮುಗಿಸಿ ಲೇಖನಿ ಪಕ್ಕಕ್ಕಿಟ್ಟು ಟಿವಿಯನ್ನ ಗಮನಿಸಿದಾಗ ಗೆದ್ದಾಗ ದೇಶ ಮೆಚ್ಚಿದ ನನ್ನ ಮಗಳನ್ನು ಇಂದು ಗಮನಿಸಿದೇ ಇರೋದು ಯಾಕೆ .ಈ ಜನಾ ಮರೆಯುತ್ತಾರೆ. ಖಂಡಿತಾ ಮರೆಯುತ್ತಾರೆ.ಎಲ್ಲರನ್ನು , ಎಲ್ಲವನ್ನು ….ಮಗಳ ಹೆಜ್ಜೆಗೆ ದಾರಿಯನ್ನ ನಿರೀಕ್ಷಿಸುತ್ತಾ ಕುಳಿತ ಅವನು
ಧೀರಜ್ ಬೆಳ್ಳಾರೆ