LATEST NEWS
ದಿನಕ್ಕೊಂದು ಕಥೆ- ಕನಸಿಗೆ ನೀರೆರೆದವ
ಕನಸಿಗೆ ನೀರೆರೆದವ
ಮದುವೆಯಾಗಲೇಬೇಕಿತ್ತು. ಓದು ನಿಂತಿತ್ತು. ಅಪ್ಪ ಅಮ್ಮ ಸುತ್ತಮುತ್ತಲಿನವರ ಒತ್ತಡಕ್ಕೋ ಏನು ಮದುವೆ ಮಾಡಿ ಬಿಟ್ಟರು. ಇವನೊಂದಿಗೆ ಬದುಕಬೇಕಿತ್ತು. ನನಗವನ ಪರಿಚಯವಿಲ್ಲ. ನನ್ನ ಕನಸುಗಳಿಗೆ ನೀರುಣಿಸುತ್ತಾನೋ, ಬೇರುಗಳನ್ನು ಕಿತ್ತು ಎಸೆಯುತ್ತಾನೆ ಗೊತ್ತಿಲ್ಲ. ಈ ಮನೆಗೆ ಕಾಲಿಟ್ಟಿದ್ದೆ. ಒಂದು ಬೆಳಗ್ಗೆ ಜೊತೆಗೆ ಕುಳಿತು ಮಾತನಾಡುತ್ತಿರುವಾಗ “ಏನೋ ಹೆಂಡತಿಗೆ ಕೆಲಸ ಕೊಡು ಮಾತಾಡಿದ್ದು ಸಾಕು” ಹೊರಗಿನಿಂದ ಮಾತೊಂದು ಕೇಳಿಬಂತು.
ಮನೇಲಿ ನಾವಿಬ್ಬರೆ. ಇವರಿಗೆ ಅಪ್ಪ-ಅಮ್ಮ ಇಲ್ಲ .ನನಗೆ ಕನಸುಗಳನ್ನು ವಿವರಿಸೋಕೆ ಸಮಯಾನೆ ಸಿಕ್ಕಿಲ್ಲ.ಇವರು ಅದೊಂದು ದಿನ ಕಾಲೇಜಿನ ಅರ್ಜಿಯೊಂದನ್ನು ತಂದು ಕೈಗಿತ್ತರು. ನನ್ನ ಕನಸಿನ ವಿದ್ಯಾಭ್ಯಾಸದ ಹೆಜ್ಜೆ ಆರಂಭವಾಯಿತು. ಓದುವಿಕೆಯ ಫಲವಾಗಿ ಬ್ಯಾಂಕೊಂದರಲ್ಲಿ ಉದ್ಯೋಗವು ದಕ್ಕಿತ್ತು. ನನ್ನ ಕಾಲ ಮೇಲೆ ನಿಲ್ಲುವ ಸಮಯದಲ್ಲೂ ಮಾತನಾಡುತ್ತಿದ್ದರು.” ನಿನಗಿಂತ ಒಳ್ಳೆಯ ವಿದ್ಯೆ ,ಕೆಲಸ ಅವಳಿಗೆ ಯಾಕೆ ?” “ಪಾತ್ರೆ ತೊಳೆಯುವವಳಿಗೆ ಪುಸ್ತಕೆ ಏಕೆ?.
ನನ್ನವರು ನಗು ನನಗೆ ಬದುಕು ನಡೆಸಲು ಸ್ಫೂರ್ತಿ ಸಿಕ್ಕಿತು. ನಾವಿಂದು ನೆಮ್ಮದಿಯಿಂದ ಇದ್ದೇವೆ. ಸಾಧನೆಗಳು ನಮ್ಮನ ಗುರುತಿಸುವಂತೆ ಮಾಡುತ್ತಿದೆ. ಈಗಲೂ ಮಾತನಾಡುತ್ತಿದ್ದಾರೆ…..
“ನನಗೆ ಗೊತ್ತಿತ್ತು ಇವರು ಸಾಧಿಸುತ್ತಾರೆ ಅಂತ ”
“ನಾನು ಹೇಳಿದೆ ಮೇಲೆ ಅವಳನ್ನು ಕಾಲೇಜಿಗೆ ಸೇರಿಸಿದ್ದು”
” ಹೆಣ್ಣು ಸಮಾಜದೊಳಗೆ ಹೋಗಬೇಕು ಅಲ್ವಾ , ನಾಲ್ಕು ಗೋಡೆಯ ನಡುವೆ ಏನು ಮಾಡೋದು”?
ಮುಂದುವರಿತಾನೆ ಇದ್ದವು ಮಾತುಗಳು.ದಾಟಿಗಳು ಬದಲಾಗಿದೆ .
“ಹಾ ಬಂದೆ ಮಗ” ಮಗ ಕರೆಯುತ್ತಿದ್ದಾನೆ.
ಧೀರಜ್ ಬೆಳ್ಳಾರೆ